ಇಂದು ಕೂಡ ತೈಲ ಬೆಲೆ ಏರಿಕೆ: ಬೆಂಗಳೂರು ಸೇರಿದಂತೆ ಹಲವೆಡೆ ಪೆಟ್ರೋಲ್​-ಡೀಸೆಲ್​ ದರ ಎಷ್ಟಿದೆ ಗೊತ್ತಾ?

Petrol
Petrol Bunk
Published on

ನವದೆಹಲಿ: ದೇಶದಲ್ಲಿ ಇಂದು(ಮಂಗಳವಾರ) ಕೂಡ ತೈಲ ಬೆಲೆ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 80 ಪೈಸೆ ಹಾಗೂ ಡೀಸೆಲ್‌ ದರ 70 ಪೈಸೆ ಹೆಚ್ಚಳವಾಗಿದೆ. ಒಂದು ವಾರದಲ್ಲಿ ತೈಲ ಬೆಲೆ ಪ್ರತಿ ಲೀಟರ್​ಗೆ ಒಟ್ಟು 4 ರೂಪಾಯಿ 80 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್​ ದರ 100ರ ಗಡಿ ದಾಟಿದೆ. ಡೀಸೆಲ್​ ದರ 90.77 ರೂ. ತಲುಪಿದೆ.

ಬೆಂಗಳೂರಲ್ಲಿ ಒಂದು ಲೀಟರ್​ ಪೆಟ್ರೋಲ್ ದರ 105.62 ರೂ., ಡೀಸೆಲ್‌ ದರ 89.70 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್‌ ದರ ಲೀಟರ್​ಗೆ 115.04 ರೂ., ಡೀಸೆಲ್‌ 99.25 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್- 105.94 ರೂ., ಡೀಸೆಲ್‌ 96.00 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್​-109.68 ರೂ., ಡೀಸೆಲ್​- 94.62 ರೂ., ಹೈದರಾಬಾದ್‌ನಲ್ಲಿ ಪೆಟ್ರೋಲ್‌- 113.61 ರೂ., ಡೀಸೆಲ್‌-99.84 ರೂ.ಗೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net