ರಾತ್ರೋರಾತ್ರಿ ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ

petrol bomb at Tamil Nadu BJP office
Published on

ಚೆನ್ನೈ: ತಮಿಳುನಾಡಿನ ಬಿಜೆಪಿ ಪ್ರಧಾನ ಕಚೇರಿ 'ಕಮಲಾಲಯಂ' ಮೇಲೆ ಅಪರಿಚಿತರು ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದ್ದಾರೆ.

ಬುಧವಾರ ತಡರಾತ್ರಿ 1.30ರ ಸುಮಾರಿನಲ್ಲಿ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಬಿಜೆಪಿ ಕಚೇರಿಯು ತಮಿಳುನಾಡು ಸಿಎಂ ಸ್ಟಾಲಿನ್​ರ ಅಧಿಕೃತ ಕಚೇರಿಯಿಂದ 2 ಕಿಮೀ ದೂರದಲ್ಲಿದೆ.

ಮಧ್ಯರಾತ್ರಿ 1:30ರ ಸುಮಾರಿಗೆ ನಮ್ಮ ಕಚೇರಿ ಮೇಲೆ ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. 15 ವರ್ಷದ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು. ಇರ್ದೀಗ ಮತ್ತೆ ದಾಳಿ ನಡೆದಿದೆ. ಇಂತಹ ಬೆದರಿಕೆಗೆ ಬಿಜೆಪಿ ಕಾರ್ಯಕರ್ತದು ಎದೆಗುಂದುವುದಿಲ್ಲ ಎಂದ ಬಿಜೆಪಿ ಮುಖಂಡ ಕರಾಟೆ ತ್ಯಾಗರಾಜನ್, ತಮಿಳುನಾಡು ಸರ್ಕಾರದ ವಿರುದ್ಧ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net