ಶವವಾದವನ ಜೇಬಿನಲ್ಲಿದ್ದ 'ಬಂಗಾರ' ಕೊಟ್ಟಿತ್ತು ಕೊಲೆಗಾರ ಸುಳಿವು...!

Murder
Published on

ಚಿಕ್ಕೋಡಿ: ಒಂದೂವರೆ ಕೆಜಿ ಬಂಗಾರ ನೀಡಿದ್ದ ಸುಳಿವಿನ ಮೇಲೆಯೇ ಕೊಲೆ ಆರೋಪಿ ಬಂಧನವಾದ ಅಚ್ಚರಿಯ ಘಟನೆ ಇದು.

ಬಂಗಾರಕ್ಕಾಗಿ ಗೆಳೆಯನನ್ನೇ ಕೊಂದ ವ್ಯಕ್ತಿ ಇದೀಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಸಾಗರ್​ ಪಾಟೀಲ್​ (30) ಮೃತ ದುರ್ದೈವಿ. ನವನಾಥ ಬಾಬರ್​ (25) ಕೊಲೆಗಾರ. ಇವರಿಬ್ಬರೂ ಉತ್ತರ ಪ್ರದೇಶದ ಮಯಗಲ್​ ಸರಾಯ್​ ಎಂಬಲ್ಲಿ ಚಿನ್ನ ಕರಗಿಸಿ ಗಟ್ಟಿ ಬಂಗಾರ ಮಾಡುವ ಅಂಗಡಿ ಇಟ್ಟಿದ್ದರು.

ಇವರಿಬ್ಬರೂ ಅಲ್ಲಿಂದ ಊರಿಗೆ ಬರುವವರಿದ್ದರು. ಆದರೆ ಬಂಗಾರದ ಆಸೆಗೆ ಬಿದ್ದ ನವನಾಥ್​, ಸಾಗರ್​ ಬ್ಯಾಗಿನಲ್ಲಿ ಬಂಗಾರ ಇದೆ. ಅದನ್ನು ಅಪಹರಿಸಬೇಕು ಎಂಬ ಆಸೆಗೆ ಬಿದ್ದು ದಾರಿ ಮಧ್ಯೆಯೆ ಆತನನ್ನು ಕೊಂದು, ಶವವನ್ನು ಕೃಷ್ಣಾ ನದಿಗೆ ಬಿಸಾಕಿದ್ದ. ಆದರೆ ಬಂಗಾರ ಸಾಗರ್​ ಬ್ಯಾಗಿನಲ್ಲಿರಲಿಲ್ಲ. ಬದಲಿಗೆ ಜೇಬಿನಲ್ಲಿ ಹಾಗೇ ಉಳಿದಿತ್ತು. ಜೇಬಿನಲ್ಲಿ ಇರವ ವಿಚಾರ ಗೊತ್ತಿಲ್ಲದೆ ನವನಾಥ್​​ ಶವವನ್ನು ಹಾಗೇ ಎಸೆದಿದ್ದ. ಇದನ್ನೂ ಓದಿ: ಇವತ್ತು 500 ಕಿಲೋ, ನಾಳೆ 600 ಕಿಲೋ… ಭಾರ ಹೊರುವುದರಲ್ಲಿ ಆನೆಗೆ ಆನೆಯೇ ಸಾಟಿ!

ಅಕ್ಟೋಬರ್ 4ರಂದು ಅಥಣಿ ತಾಲೂಕಿನ ಅವರಖೋಡ ಬಳಿ ಕೃಷ್ಣಾ ನದಿಯಲ್ಲಿ ಸಾಗರ್​ ಮೃತ ದೇಹ ಪತ್ತೆಯಾಗಿತ್ತು. ಆತನ ಜೇಬಿನಲ್ಲಿ ಭದ್ರವಾಗಿ ಇಟ್ಟಿದ್ದ ಬಂಗಾರವೂ ಹಾಗೇ ಇತ್ತು. ಅದರ ಜಾಡು ಹಿಡಿದು ತನಿಖೆ ನಡೆಸಿದ್ದ ಪೊಲೀಸರು ನವನಾಥ್​​ನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net