ದೇಶದ ಆರ್ಥಿಕ ಸ್ಥಿತಿಗತಿ ಆಧರಿಸಿ ಬಜೆಟ್​ ಮಂಡನೆ: ನಿರ್ಮಲಾ ಸೀತಾರಾಮನ್​

New Project(2)
Published on

ದೆಹಲಿ: ಬಹುನಿರೀಕ್ಷಿತ ಕೇಂದ್ರ ಬಜೆಟ್​ ಮಂಡನೆ ಇಂದು ಬೆಳಗ್ಗೆ 11ಕ್ಕೆ ಆರಂಭವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಪ್ರತಿ ಓದುವ ಆರಂಭದಲ್ಲೇ ಭಾರತದ ಆರ್ಥಿಕ ಶಕ್ತಿ ಸುಧಾರಿಸುತ್ತಿದೆ. ದೇಶದ ಬೆಳವಣಿಗೆ ಶೇ. 9.27 ನಿರೀಕ್ಷೆ ಇದೆ. ದೇಶದ ಆರ್ಥಿಕ ಸ್ಥಿತಿಗತಿ ಆಧರಿಸಿ ಬಜೆಟ್​ ರೂಪಿಸಲಾಗಿದೆ ಎಂದರು.

ಕರೊನಾ ಜತೆಗೆ ಒಮಿಕ್ರಾನ್​ ದೇಶವನ್ನ ಕಾಡ್ತಿದೆ. ಕರೊನಾ ಪ್ಯಾಂಡಮಿಕ್​ ಸಮರ್ಥವಾಗಿ ಎದುರಿಸಿದ್ದೇವೆ. ಈ ಬಜೆಟ್​ ಮುಂದಿನ 25 ವರ್ಷದ ಗುರಿ ಹೊಂದಿದ್ದು, 60 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಮೇಕ್​ ಇಂಡಿಯಾ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ. ಪಿಎಂ ಗತಿಶಕ್ತಿ ಯೋಜನೆ ಜಾರಿಯಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net