ಹೆರಿಗೆ ನೋವಿನಲ್ಲೂ ಆಸ್ಪತ್ರೆಗೆ ಸೈಕಲ್​ನಲ್ಲೇ ಬಂದು ಮಗುವಿಗೆ ಜನ್ಮನೀಡಿದ ಸಂಸದೆ!

New Project (35)
Published on

ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್​ನ ಸಂಸದೆ ಜೂಲಿ ಅನ್ನೆ ಜೆಂಟರ್ ಹೆರಿಗೆ ನೋವಲ್ಲೂ ಸೈಕಲ್​ನಲ್ಲೇ ಆಸ್ಪತ್ರೆಗೆ ಆಗಮಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಆಸ್ಪತ್ರೆಗೆ ಬಂದ ಕೆಲವೇ ಸಮಯದಲ್ಲಿ ಸಂಸದೆಗೆ ಹೆರಿಗೆ ಆಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

ನ್ಯೂಜಿಲ್ಯಾಂಡ್​ನ ಗ್ರೀನ್‌ ಪಕ್ಷದ ಸಂಸದೆ, ತುಂಬುಗರ್ಭಿಣಿಯಾಗಿದ್ದ ಜೂಲಿ ಅನ್ನೆ ಜೆಂಟರ್ ಅವರು ಗಂಡನ ಜತೆ ಶನಿವಾರ ಮಧ್ಯರಾತ್ರಿ ಸೈಕಲ್​ನಲ್ಲೇ ಆಸ್ಪತ್ರೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಹೆರಿಗೆ ನೋವು ವಿಪರೀತವಾಗಿ ಕಾಣಿಸಿಕೊಂಡರೂ ಆಸ್ಪತ್ರೆಗೆ ಸೈಕ್ಲಿಂಗ್ ಮಾಡಿಕೊಂಡೇ ಬಂದು ದಾಖಲಾದರು. ಭಾನುವಾರ ನಸುಕು 3 ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಖುಷಿಯ ಕ್ಷಣವನ್ನು ಸಂಸದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರು ಸೈಕಲ್​ನಲ್ಲಿ ಆಸ್ಪತ್ರೆಗೆ ಬಂದದ್ದು ಇದೇ ಮೊದಲಲ್ಲ. 3 ವರ್ಷದ ಹಿಂದೆ ಅಂದರೆ 2018ರಲ್ಲಿ ಮೊದಲ ಮಗುವಿನ ಹೆರಿಗೆ ಸಮಯದಲ್ಲೂ ಸಂಸದೆ ಸೈಕಲ್​ನಲ್ಲೇ ಆಸ್ಪತ್ರೆಗೆ ಬಂದಿದ್ದರು.

ಮೊದಲ ಮಗುವಿಗೆ ಜನ್ಮನೀಡುವ ವೇಳೆಯೂ ಆಸ್ಪತ್ರೆಯವರೆಗೂ ಸೈಕಲ್​ನಲ್ಲೇ ಬಂದು ಯಶಸ್ವಿ ಹೆರಿಗೆ ಮಾಡಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ (ತಡರಾತ್ರಿ) ಸೈಕ್ಲಿಂಗ್ ಮಾಡಿ ಆಸ್ಪತ್ರೆಗೆ ಆಗಮಿಸಿ ಗಮನ ಸೆಳೆದಿದ್ದಾರೆ. ಇವರಿಗೆ ಮೊದಲ ಮಗು ಗಂಡು, ಎರಡನೇ ಮಗು ಹೆಣ್ಣು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net