

ಬೆಂಗಳೂರು: ಕೇವಲ 10 ದಿನಗಳಲ್ಲಿ ಜಾಗತಿಕವಾಗಿ ಸಿನಿಪ್ರೇಕ್ಷಕರ ಎದುರು ಹಾಜರಾಗಲಿರುವ ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಸಲಾರ್ ಭಾಗ 1' ಸಿನಿಮಾ ಇದೀಗ ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಭಾರೀ ಸದ್ದು ಮಾಡುತ್ತಿದೆ. 'ಕೆಜಿಎಫ್' ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕುರಿತಂತೆ ಸದ್ಯ ಹೊಸ ಅಪ್ಡೇಟ್ವೊಂದು ಹೊರಬಿದ್ದಿದೆ.
ಇದನ್ನೂ ಓದಿ: ಸಂತಾನಹರಣಗೊಂಡ ಮಹಿಳೆ 2 ಮಕ್ಕಳಿಗೆ ಜನ್ಮ ನೀಡಿದಳು!
ಪ್ಯಾನ್ ಇಂಡಿಯಾ ಚಿತ್ರವಾದ 'ಸಲಾರ್: ಭಾಗ 1' ಸೀಸ್ ಫೈರ್ ಆಕ್ಷನ್ ಜಾನರ್ ಹೊಂದಿದ್ದು, ಪ್ರಭಾಸ್ಗೆ ನಾಯಕಿಯಾಗಿ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಇದೇ ಡಿಸೆಂಬರ್ 15, 2023 ರಂದು ಭಾರತದಲ್ಲಿ ಸಲಾರ್‌ಗಾಗಿ ಮುಂಗಡ ಬುಕಿಂಗ್ ಪ್ರಾರಂಭವಾಗಲಿದೆ ಎಂದು ತಯಾರಕರು ಈಗಾಗಲೇ ಘೋಷಿಸಿರುವುದು ಸದ್ಯ ಚಿತ್ರರಸಿಕರಲ್ಲಿ ಭಾರೀ ಉತ್ಸಾಹ ಹೆಚ್ಚಿಸಿದೆ.
ಇದೀಗ 'ಸಲಾರ್' ಕುರಿತು ಕೇಳಿಬಂದ ಹೊಸ ಮಾಹಿತಿಯ ಪ್ರಕಾರ, ಚಿತ್ರವು ಸುಮಾರು 1 ಗಂಟೆ 43 ನಿಮಿಷಗಳ ದೀರ್ಘಾವಧಿಯ ಸೆಕೆಂಡ್ ಆಫ್ ಹೊಂದಿದ್ದು, ಇದು ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್' ಚಿತ್ರದ ಫಸ್ಟ್ ಆಫ್ಗೆ ಬಹುತೇಕ ಸರಿಸಮಾನವಾಗಿದೆ ಎಂದು ತಿಳಿಸಲಾಗಿದೆ.
ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).