

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ನಿವಾಸದ ಮೇಲೆ ಎನ್ಸಿಬಿ ದಾಳಿ ಮಾಡಿದೆ. ನಟಿ ಅನನ್ಯ ಪಾಂಡೆ ನಿವಾಸದ ಮೇಲೂ ದಾಳಿ ಮಾಡಿದ್ದು, ಇಂದು ಮಧ್ಯಾಹ್ನ2 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿರುವ ಪುತ್ರ ಆರ್ಯನ್ ಖಾನ್ನನ್ನು ಇಂದು(ಗುರುವಾರ) ಬೆಳಗ್ಗೆ ಜೈಲಿನಲ್ಲಿ ಶಾರುಖ್ ಖಾನ್ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಶಾರುಖ್ ನಿವಾಸ 'ಮನ್ನತ್' ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಹಿನ್ನೆಲೆಯಲ್ಲಿ ಅ.3 ರಂದು ಆರ್ಯನ್ ಖಾನ್ನನ್ನು ಬಂಧಿಸಿ ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿಡಲಿದಾಗಿದೆ. ಆರ್ಯನ್ ಖಾನ್ರ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಎನ್ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು.