ಶಾಸಕರು ದೆಹಲಿಗೆ ಹೋದರೆ ತಪ್ಪೇನು?: ನಳೀನ್​ ಕುಮಾರ್​ ಕಟೀಲ್​

ಶಾಸಕರು ದೆಹಲಿಗೆ ಹೋದರೆ ತಪ್ಪೇನು?: ನಳೀನ್​ ಕುಮಾರ್​ ಕಟೀಲ್​ - youtube
Published on

ಕಲಬುರಗಿ: ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಪರಿಪಾಠವಿದೆ. ಹೀಗಾಗಿ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕರು ದೆಹಲಿಗೆ ಹೋದರೆ ತಪ್ಪೇನು ಎಂದು ಪ್ರಶ್ನಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ನಳೀನ್​ ಕುಮಾರ್ ಕಟೀಲ್, ಮಂತ್ರಿ ಮಂಡಲದ ರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ತಮ್ಮ ಕೆಲಸ ಕಾರ್ಯಗಳಿಗಾಗಿ ಅವರು ದೆಹಲಿಗೆ ಹೋಗಿ ಬರ್ತಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಈಗಲೇ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಹುದ್ದೆಗೆ‌ ಸ್ಪರ್ಧೆ ನಡೆದಿದೆ. ಸಿಎಂ ಹುದ್ದೆಗೆ ಮ್ಯೂಸಿಕಲ್​ ಚೇರ್​ ಆಟ ಜೋರಾಗಿ ನಡೆದಿದೆ ಎಂದು ಲೇವಡಿ ಮಾಡಿದರು.

ನಮ್ಮ ರಾಜ್ಯ ಕಂಡ ಮೋಸಗಾರ ಮತ್ತು ವಂಚಕ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಯ್ಯ. ಮೊದಲು ಅಹಿಂದದ ಹೆಸರು ಹೇಳಿ ಸಿಎಂ ಆದ್ರು. ಸಿಎಂ ಆದ ನಂತರ ಅಹಿಂದ ಮರೆತು ಬಿಟ್ಟಿದ್ದರು ಎಂದು ಕಟೀಲ್​ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net