ಮಗುವಿಗೆ ಜನ್ಮ ನೀಡಿದ ನರ್ಸ್​ ​ಲೋ ಬಿಪಿಯಾಗಿ ಸಾವು

death
Published on

ಮುಳಬಾಗಿಲು: ಮಗುವಿಗೆ ಜನ್ಮ ನೀಡಿದ ತಾಯಿ ಲೋ ಬಿಪಿಯಾಗಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ವೀಣಾ (35) ಮೃತ ದುರ್ದೈವಿ. ಉತ್ತನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿದ್ದ ವೀಣಾ ಶಿಕ್ಷಕ ರಾಮಮೂರ್ತಿ ಅವರ ಪತ್ನಿ. ಈ ದಂಪತಿಗೆ ಈಗಾಗಲೇ ಒಂದು ಮಗು ಇದ್ದು, ಮೊನ್ನೆ 2ನೇ ಮಗುವಿಗೆ ವೀಣಾ ಜನ್ಮ ನೀಡಿದ್ದಳು.

ಹೆರಿಗೆ ವೇಳೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಗೆ ವೀಣಾಳನ್ನು ದಾಖಲಿಸಲಾಗಿತ್ತು. ಲೋ ಬಿಪಿ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ತಾಯಿ ಮೃತಪಟ್ಟಿದ್ದು, ಮಗು ಆರೋಗ್ಯವಾಗಿದೆ. ಉತ್ತನೂರಿನಲ್ಲಿ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು.

ಓ ದೇವರೇ, ಹಲವರ ಪ್ರಾಣ ಉಳಿಸುವ ಕೆಲಸ ಮಾಡಿಕೊಂಡೇ ಇದ್ದ ವಿಣಾಳಿಗೆ ಇಂಥ ಸಾವು ನ್ಯಾಯವೇ, ಪುಟ್ಟ ಮಕ್ಕಳಿಗೆ ತಾಯಿ ಇಲ್ಲದಂತೆ ಮಾಡಿಬಿಟ್ಟೆಯಲ್ಲ... ಎಂದು ಮೃತರ ಕುಟುಂಬಸ್ಥರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net