ಯಾವನ್ ಐಜಿ? ಮೂಡಿಗೆರೆಗೆ ನಾನೇ ದೊಡ್ಡವನು... ಪಿಎಸ್​ಐಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಆವಾಜ್​

mp kumaraswamy
Published on

ಚಿಕ್ಕಮಗಳೂರು: ಪಿಎಸ್​ಐ ರವೀಶ್​ ಅವರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವಾಜ್​ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಡಿಯೋದಲ್ಲಿ ಏನಿದೆ ನೋಡಿ...

ಶಾಸಕ: ಹಲೋ ಯಾರಪ್ಪ ಇದು ನಂಬರ್

ರವೀಶ್: ನಾನು ರವೀಶ್ ಸಾರ್

ಶಾಸಕ: ಈಗ ಎಲ್ಲಿದ್ದೀಯಪ್ಪ ನೀನು?

ರವೀಶ್: ಸ್ಟೇಷನ್​ನಲ್ಲಿ‌ ಸರ್

ಶಾಸಕ: ಇಲ್ಲಿಗೆ ಬರ್ಬೆಡ ಅಂದಿದ್ನಲ್ಲ ನಾನು

ರವೀಶ್: ಐಜಿ ಸಾರ್ ತಗೋ ಅಂತ ಹೇಳಿದ್ರು ಸರ್

ಶಾಸಕ: ವಾಪಸ್ ಹೋಗಲೇ ‌ಮರ್ಯಾದೆಯಿಂದ ವಾಪಸ್ಸು ಹೋಗು..

ರವೀಶ್: ನಾಳೆ ಬಂದ್ ನಿಮ್ಮನ್ನು ಕಾಣ್ತೀನಿ

ಶಾಸಕ: ನನಗೆ ವಾಪಸ್ಸು ಕಳಿಸುವುದು ಗೊತ್ತು, ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದೀಯಾ ಅಂತಾನೂ ಗೊತ್ತು

ರವೀಶ್: ಇಲ್ಲ ಸಾರ್ ಯಾರಿಗೂ ಏನೂ ಕೊಟ್ಟಿಲ್ಲ, ಐಜಿ ಹೇಳಿದ್ರು ಅಷ್ಟೆ

ಶಾಸಕ: ಯಾವನ್ ಐಜಿ? ಮೂಡಿಗೆರೆಗೆ ನಾನೇ ದೊಡ್ಡವನು, ಮರ್ಯಾದೆಯಿಂದ ವಾಪಸ್ ಹೋಗು

ಹೀಗೆ ಸಂಭಾಷಣೆಯುಳ್ಳ ಆಡಿಯೋ ವೈರಲ್​ ಆದ ಬೆನ್ನಲ್ಲೇ ಈ ಕರಿತು ಫೇಸ್​ಬುಕ್​ ಮೂಲಕ ಸ್ಪಷ್ಟನೆ ನೀಡಿರುವ ಶಾಸಕರು. ಇದೆಲ್ಲವೂ ನನ್ನ ವಿರೋಧಿಗಳು ಮಾಡಿರೋ ಕುತಂತ್ರ. ಹೆಚ್ಚು ಕೂಲಿ ಕಾರ್ಮಿಕರಿದ್ದು, ನೀವು ಮಂಡ್ಯದವರು ಆಗಿರೋದ್ರಿಂದ ಜನರನ್ನು ಸಂಭಾಳಿಸೋದು ಕಷ್ಟ ಎಂದು ತಿಳಿ ಹೇಳಿದ್ದೆ. ನನ್ನ ಗಮನಕ್ಕೆ ಬಾರದೇ ನನ್ನ ಕ್ಷೇತ್ರದಲ್ಲಿ ಕೆಲಸಕ್ಕೆ ಹಾಜರಾಗಿದ್ದರು. ನನ್ನ ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರು ಒತ್ತಡ ಹಾಕಿದ್ದರಿಂದ ನಾನೇ ಮಾತನಾಡಬೇಕಿದೆ. ಇದೀಗ ಒಕ್ಕಲಿಗ ವಿರೋಧಿ ಎಂದು ಹೆಣೆಯುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ನನ್ನ ವಿರೋಧಿಗಳು ಹೆಣೆದಿರುವ ಕುತಂತ್ರವನ್ನು ದಯವಿಟ್ಟು ಯಾರು ನಂಬಬಾರದು ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net