ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕುಳಿತು ಊಟ ಮಾಡಿದ ಮಂಗ

SRT
Published on

ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಕಚೇರಿಯ ಆವರಣದಲ್ಲಿ ಊಟಕ್ಕೆ ಕುಳಿತಿದ್ದ ಅಂಗನವಾಡಿ ಕಾರ್ಯಕರ್ತೆಯರ ಬಳಿ ಬಂದ ಮಂಗಯೊಂದು ಅವರೊಟ್ಟಿಗೆ ಕುಳಿತು ಊಟ ಮಾಡಿದ ದೃಶ್ಯ ಎಲ್ಲೆಡೆ ಸದ್ದು ಮಾಡಿದೆ.

ಮನುಷ್ಯರು ಕುಳಿತು ಊಟ ಮಾಡುವ ಭಂಗಿಯಲ್ಲಿಯೇ ಮಂಗ ಕುಳಿತು ಊಟ ಮಾಡಿದೆ.

ಸೋಮವಾರ ಸಿಡಿಪಿಒ ಕಚೇರಿಯಲ್ಲಿ ಸಭೆಗೆ ಬಂದಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಧ್ಯಾಹ್ನ ಒಟ್ಟಿಗೆ ಕುಳಿತು ಊಟ ಮಾಡಲೆಂದು ತಾವು ತಂದಿದ್ದ ಬುತ್ತಿ ಬಿಚ್ಚಿ ಊಟ ಮಾಡುತ್ತಿರುವಾಗ ಮಂಗವೂ ಅವರೊಟ್ಟಿಗೆ ಕುಳಿತು ಊಟ ಮಾಡಿದೆ. ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಸಾತಪುತೆ ಎಂಬುವರು ಮಂಗನಿಗೆ ಕೈ ತುತ್ತು ನೀಡಿ ಊಟ ಮಾಡಿಸಿದ್ದಾರೆ. ಈ ಅಪರೂಪದ ದೃಶ್ಯಗಳು ಈಗ ಎಲ್ಲೆಡೆ ವೈರಲ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net