VIDEO| ಸಿಎಂ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್ ಸೇರಲು ದಿಲ್ಲಿಯಲ್ಲಿ ಶಾಸಕರ ಪರೇಡ್!

1146904
Published on

ದೆಹಲಿ: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆ ಭಾರೀ ಕುತೂಹಲ ಮೂಡಿಸಿದೆ. ಮಂತ್ರಿಗಿರಿಗಾಗಿ ಹಲವರು ಬಿಎಸ್​ವೈ ಸುತ್ತ ಗಿರಿಕಿ ಹೊಡೆಯುತ್ತಲೇ ಇದ್ದಾರೆ. ಅತ್ತ ಕೆಲ ಶಾಸಕರು ಮಂತ್ರಿಗಿರಿಗಾಗಿ ದಿಲ್ಲಿಯಲ್ಲಿ ಪರೇಡ್ ನಡೆಸುತ್ತಿದ್ದಾರೆ.

ಇಂದು ಸಂಜೆ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಅವರನ್ನು ಸಿಎಂ ಬೊಮ್ಮಾಯಿ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಗ್ರೀನ್​ ಸಿಗ್ನಲ್​ ಪಡೆಯಲು ಸಜ್ಜಾಗಿದ್ದಾರೆ. ಈ ನಡುವೆ ಆರ್​.ಅಶೋಕ್​, ಲಕ್ಷ್ಮಣ ಸವದಿ, ರಾಜೂಗೌಡ, ಸಿ.ಸಿ.ಪಾಟೀಲ್​, ಸತೀಶ್​ ರೆಡ್ಡಿ ಅವರು ದೆಹಲಿಯ ಕರ್ನಾಟಕ ಭವನದಲ್ಲೇ ಠಿಕಾಣಿ ಹೂಡಿದ್ದು, ಈ ದೃಶ್ಯ 'ವಿಜಯವಾಣಿ'ಗೆ ಲಭ್ಯವಾಗಿದೆ.

ಯಾವಾಗ ಕರೆ ಬರುತ್ತೆ... ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಲವರು ಜಿದ್ದಾಜಿದ್ದಿಗೆ ಬಿದ್ದಂತೆ ಲಾಸ್ಟ್ ಮಿನಿಟ್​ ಕಸರತ್ತು ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಯಾವೊಬ್ಬ ಶಾಸಕರಿಗೂ ದೂರವಾಣಿ ಕರೆ ಬಂದಿಲ್ಲ. ಸಂಜೆ ನಡ್ಡಾ ಅವರು ಸಿಎಂ ಭೇಟಿ ಬಳಿಕ ಸಚಿವರಾಗುವ ಶಾಸಕರಿಗೆ ಕರೆ ಬರುವ ಸಾಧ್ಯತೆ ಇದೆ. ಮೊದಲ ಕಂತಿನಲ್ಲಿ 22 ಶಾಸಕರು ಕ್ಯಾಬಿನೆಟ್ ಸೇರ್ಪಡೆ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾರೆಲ್ಲ ಕ್ಯಾಬಿನೆಟ್ ಪ್ರವೇಶಿಸುತ್ತಾರೆ, ಹಾಲಿ ಮಂತ್ರಿಗಳ ಪೈಕಿ ಹೊರ ಹೋಗುವವರು ಯಾರು ಎಂಬುದಕ್ಕೆ ಇನ್ನೆರಡು ದಿನದಲ್ಲಿ ತೆರೆ ಬೀಳುವ ಸಾಧ್ಯತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net