ಮದುವೆ ಆದ ದಿನವೇ ವರನ ದುರಂತ ಸಾವು! ಮೊದಲ ರಾತ್ರಿ ಆ ಕೋಣೆಯಲ್ಲಿ ಆಗಿದ್ದೇನು?

wedding
Published on

ಹೈದರಾಬಾದ್​: ಮದುವೆ ಮಾಡಿದ ಸಂಭ್ರಮದಲ್ಲಿ ವರ ಮತ್ತು ವಧುವಿನ ಕುಟುಂಬಸ್ಥರು ಸಂಭ್ರಮದಲ್ಲಿ ಮುಳುಗಿದ್ದರು. ಅತ್ತ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ನವವಿವಾಹಿತ ದುರಂತ ಅಂತ್ಯ ಕಂಡಿದ್ದಾನೆ.

ಸೂರ್ಯ ಬಾಬು ಮೃತ ದುದೈರ್ವಿ. ಇವನ ಮದುವೆ ಭಾನುವಾರ ಸಂಜೆ ನಡೆದಿತ್ತು. ಮದ್ವೆಯಾದ ಐದೇ ತಾಸಿಗೆ ಅಂದರೆ ಆ ದಿನದ ರಾತ್ರಿಯೇ ಮದುಮಗ ಮನೆಯ ಕೋಣೆಯಲ್ಲಿ ನೇನುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿದು ಬಂದಿಲ್ಲ. ಮದುಮಗಳು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇಂತಹ ಘಟನೆ ಭಾನುವಾರ ಮಧ್ಯರಾತ್ರಿ ತೆಲಂಗಾಣದ ಜೋಗುಲಾಂಬ ಗಡ್ವಾಲಾ ಜಿಲ್ಲೆಯ ವದ್ದೇಪಳ್ಳಿಯಲ್ಲಿ ಸಂಭವಿಸಿದ್ದು, ಮದುಮಗ ಸತ್ತ ರಾತ್ರಿ ಮೃತನ ಕುಟುಂಬಸ್ಥರು ಮತ್ತು ವಧುವಿನ ಕಡೆಯವರ ನಡುವೆ ದೊಡ್ಡ ಗಲಾಟೆಯೂ ನಡೆದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದು, ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net