ಬಾಯ್​ಫ್ರೆಂಡ್​ ಜತೆ ಗೋವಾಕ್ಕೆ ಪ್ರವಾಸ ಹೋದ ನಟಿ ಈಶ್ವರಿ ದುರಂತ ಸಾವು! ಗೆಳೆಯನೂ ಬದುಕಲಿಲ್ಲ

actor eshwari
Published on

ಗೋವಾ: ಸಿನಿಮಾ ನಟ-ನಟಿಯರು ರಸ್ತೆ ಅಪಘಾತಕ್ಕೀಡಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅಪಘಾತದಲ್ಲಿ ಸಂಚಾರಿ ವಿಜಯ್​ ದುರಂತ ಅಂತ್ಯ ಕಂಡ ಘಟನೆ ಇನ್ನೂ ಮಾಸಿಲ್ಲ. ಇತ್ತೀಚಿಗಷ್ಟೇ ತೆಲುಗು ನಟ ಸಾಯಿ ಧರ್ಮ ತೇಜಾ ರಸ್ತೆ ಅಪಘಾತಕ್ಕೀಡಾಗಿದ್ದರು. ನಟಿ ಯಶಿಕಾ ಆನಂದ್​ ಕಾರು, ನಟ ಜಗ್ಗೇಶ್​ ಅವರ ಪುತ್ರನ ಕಾರು ಕೂಡ ಅಪಘಾತಕ್ಕೀಡಾಗಿತ್ತು. ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ನಟಿ ಈಶ್ವರಿ ಮತ್ತು ಇವರ ಗೆಳೆಯ ಇಬ್ಬರೂ ಮೃತಪಟ್ಟಿದ್ದಾರೆ.

ಮರಾಠಿಯ ಯುವ ನಟಿ ಈಶ್ವರಿ ದೇಶಪಾಂಡೆ(25) ಮತ್ತು ಸ್ನೇಹಿತ ಶುಭಂ ದಡ್ಗೆ(28) ಮೃತರು. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಮುಂದಿನ ತಿಂಗಳು ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದರು. ರಜೆ ಹಿನ್ನೆಲೆ ಸೆಪ್ಟೆಂಬರ್​​ 15ರಂದು ಗೋವಾಕ್ಕೆ ಇಬ್ಬರೂ ಕಾರಿನಲ್ಲಿ ತೆರಳಿದ್ದರು.

ಗೋವಾದ ಅರ್ಪೋರಾ ಗ್ರಾಮದ ಬಳಿ ಬಾಗಾ-ಕ್ಯಾಲಂಗೂಟ್​ ಮಾರ್ಗದ ಸೇತುವೆ ಬಳಿ ಕಾರು ಕಂದಕಕ್ಕೆ ಸೋಮವಾರ ಬೆಳಗ್ಗೆ ಉರುಳಿಬಿದ್ದಿದ್ದು, ಸ್ಥಳದಲ್ಲೇ ನಟಿ ಈಶ್ವರಿ ಮತ್ತು ಸ್ನೇಹಿತ ಶುಭಂ ಇಬ್ಬರೂ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net