'3 ದಿನ ನಿಂಗೆ, 3 ದಿನ ನಂಗೆ​' ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಹಿಂದೆ ಬಿದ್ದ ಪೊಲೀಸರು

husband
Published on

ರಾಂಚಿ: ಅನಿಲ್​ ಕಪೂರ್​ ಅವರ ಘರ್​ವಾಲಿ ಬಾಹರ್​ವಾಲಿ ಸಿನಿಮಾ ನೋಡಿದ್ದೀರ. ಅದೇ ಸಿನಿಮಾ ನಿಜವಾಗಿಬಿಟ್ಟರೆ. ಹೌದು! ಜಾರ್ಖಂಡ್​ನ ರಾಂಚಿಯಲ್ಲಿ ಇಂತದ್ದೇ ಒಂದು ಕುಟುಂಬ ಇದೆ ಕೂಡ. ಆದರೆ ಇದೀಗ ಆ ಕುಟುಂಬದಲ್ಲಿ ಬಿರುಕು ಬಂದಿದ್ದು, ಇಬ್ಬರು ಹೆಂಡಿರ ಮುದ್ದಿನ ಗಂಡನ ಬೆನ್ನ ಹಿಂದೆ ಪೊಲೀಸರು ಬಿದ್ದಿದ್ದಾರೆ.

ರಾಜೇಶ್​ ಮಹತೋ ಹೆಸರಿನ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿದೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಆತ ಇನ್ನೊಂದು ಹೆಣ್ಣಿನ ಹಿಂದೆ ಬಿದ್ದಿದ್ದಾನೆ. ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು, ಆಕೆಯನ್ನು ಓಡಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಇತ್ತ ಆತನ ಮೊದಲ ಹೆಂಡತಿ, ಮಗು ಹಾಗೂ ಯುವತಿಯ ಮನೆಯವರು ಅವರಿಬ್ಬರ ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರ ಸಹಾಯದಿಂದ ಕೊನೆಗೂ ಈ ಜೋಡಿ ಇದ್ದ ಜಾಗ ಹುಡುಕಲಾಗಿದೆ.

ಓಡಿ ಹೋಗಿದ್ದ ಜೋಡಿ ಸಿಕ್ಕಾಗ ರಾಜೇಶನ ಮೊದಲನೇ ಹೆಂಡತಿಗೂ ಹಾಗೂ ಎರಡನೇ ಹೆಂಡತಿಗೆ ಜಗಳ ಶುರುವಾಗಿದೆ. ಪ್ರಕರಣವನ್ನು ಮುಂದುವರಿಸಿದೆ, ಕೊನೆಗಾಣಿಸಲು ಬಯಸಿದ ಪೊಲೀಸರು ಒಂದು ಉಪಾಯ ಮಾಡಿದ್ದಾರೆ. ರಾಜೇಶನಿಗೆ ಮೂರು ದಿನ ಒಂದು ಹೆಂಡತಿ ಜತೆ ಹಾಗೂ ಮೂರು ದಿನ ಇನ್ನೊಂದು ಹೆಂಡತಿಯ ಜತೆ ಇರಲು ಹೇಳಿದ್ದಾರೆ. ಉಳಿಯುವ ಒಂದು ದಿನವನ್ನು ನಿನ್ನಿಷ್ಟದಂತೆ ಬದುಕು ಎಂದು ಹೇಳಿದ್ದಾರೆ. ಅದಕ್ಕೆ ಹೆಂಡತಿಯರು ಒಪ್ಪಿದ್ದು, ಅಗ್ರೀಮೆಂಟ್​ನ್ನು ಮಾಡಿಕೊಳ್ಳಲಾಗಿದೆ.

ಒಂದು ವರ್ಷದ ಕಾಲ ಈ ಅಗ್ರೀಮೆಂಟ್​ ಜೀವನ ಚೆನ್ನಾಗಿಯೇ ಸಾಗಿದೆ. ಆದರೆ ಇತ್ತೀಚೆಗೆ ಆತನಿಗೆ ಎರಡನೇ ಹೆಂಡತಿಯೊಂದಿಗೆ ಸ್ವಲ್ಪ ಕಲಹವಾಗಿದ್ದು, ಆಕೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಗಂಡ ತನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾಗಿ ದೂರು ನೀಡಿದ್ದಾಳೆ. ಆರೋಪಿಯ ಬೆನ್ನ ಹಿಂದೆ ಪೊಲೀಸರು ಬಂದಿದ್ದಾರೆ. ಇದೀಗ ಆತನ ಮೊದಲನೇ ಹೆಂಡತಿಗೆ ಅವನ ಬೆಂಗಾವಲಾಗಿ ನಿಂತಿದ್ದು, ಪೊಲೀಸರು ಬಂಧಿಸಲು ಹೋದಾಗಲೂ ಆತನಿಗೆ ಓಡಿ ಹೋಗುವುದಕ್ಕೆ ಸಹಾಯ ಮಾಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net