

Fire: ಅಮೆರಿಕದ ಡಲ್ಲಾಸ್‌ನಲ್ಲಿರುವ ಫೆಡರಲ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಕಚೇರಿಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಇನ್ನು ಗುಂಡು ಹಾರಿಸ ವ್ಯಕ್ತಿ ತಾನೇ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಧೃಢಪಡಿಸಿದೆ.
ಗಾಯಗೊಡವರು ಸಂದರ್ಶಕರೇ, ಸಾಮಾನ್ಯ ಭೇಟಿ ನೀಡುವವರೇ ಅಥವಾ ಅಧಿಕಾರಿಗಳೇ ಎಂದು ಸದ್ಯಕ್ಕೆ ಪೊಲೀಸರು ಧೃಢಪಡಿಸಿಲ್ಲ. ವಾಯುವ್ಯ ಡಲ್ಲಾಸ್‌ನಲ್ಲಿರುವ ಈ ಸ್ಥಳಕ್ಕೆ ಪೊಲೀಸರು ಸ್ಥಳೀಯ ಬೆಳಿಗ್ಗೆ 7:30ರ ಸುಮಾರಿಗೆ ಆಗಮಿಸಿದರು. ಗುಂಡಿನ ದಾಳಿಕೋರ ಹತ್ತಿರದ ಕಟ್ಟಡದ ಛಾವಣಿಯ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿ ಉಲ್ಲೇಖಿಸಿದೆ. ಕಾರಣ ಏನು? ಗುಂಡಿನ ದಾಳಿ ಮಾಡಿದಾವ್ಯಾರು ಎಂಬುದು ತನಿಖೆ ಮಾಡುತ್ತಿದ್ದಾರೆ.