

Pet Dog: ದೆಹಲಿಯ ಎನ್ಸಿಆರ್ನಿಂದ ಎಲ್ಲಾ ಬೀದಿ ನಾಯಿಗಳನ್ನು ತೆಗೆದುಹಾಕುವ ಸುಪ್ರೀಂ ಕೋರ್ಟ್ನ ತೀರ್ಪಿನ ವಿರುದ್ಧ ದೇಶಾದ್ಯಂತ ನಾಯಿ ಪ್ರಿಯರು ನಾಯಿಗಳಿಗಾಗಿ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನು ಪ್ರಾಣಿ ಪ್ರಿಯರ ಹೋರಾಟದ ಮಧ್ಯೆ ಬಿಹಾರದಿಂದ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕನೊಬ್ಬ ಸಾಕು ನಾಯಿಯನ್ನು ರೈಲಿನ ಸೀಟಿಗೆ ಕಟ್ಟಿ ಅಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
ಬಿಹಾರದಿಂದ ಸಮಷ್ಟಿಪುರಕ್ಕೆ ತೆರಳುತ್ತಿದ್ದ 55578 ಸಂಖ್ಯೆಯ ರೈಲು ಹತ್ತುವಾಗ ನಾಯಿ ಇರುವ ದೃಶ್ಯ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬರು ರೈಲಿನಲ್ಲಿ ಪ್ರಯಾಣಿಸಿದ ನಂತರ, ಸಾಕುಪ್ರಾಣಿಯನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ತೊಂದರೆಯಲ್ಲಿ ಸಿಲುಕಿದ್ದ ನಾಯಿ ಜೋರಾಗಿ ಬೊಗಳಲು ಪ್ರಾರಂಭಿಸಿದೆ. ಕಂಪಾರ್ಟ್ಮೆಂಟ್ ಹತ್ತಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕರನ್ನು ಕಚ್ಚಲು ಸಹ ಪ್ರಯತ್ನಿಸುತಿತ್ತು. ನಾಯಿಯ ಆಕ್ರಮಣಕಾರಿ ವರ್ತನೆಯಿಂದಾಗಿ ಪ್ರಯಾಣಿಕರು ಬೋಗಿಯೊಳಗೆ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಈ ಪರಿಸ್ಥಿತಿಯನ್ನು ಸುಧಾರಿಸಲು ರೈಲ್ವೆ ಸಿಬ್ಬಂದಿಗಳು ಪ್ರಯತ್ನಿಸಿದ್ದು, ರಕ್ಸೌಲ್ ನಿಲ್ದಾಣದಲ್ಲಿ ಸುಮಾರು 30 ನಿಮಿಷಗಳ ಕಾಲ ರೈಲು ಅಲ್ಲೇ ನಿಂತಿತ್ತು ಎಂದು ವರದಿಯಾಗಿದೆ.
ಸುದ್ದಿ ಮೂಲಗಳ ಪ್ರಕಾರ, ರೈಲ್ವೆ ಅಧಿಕಾರಿಗಳು ಕೋಚ್ನಿಂದ ಪ್ರಾಣಿಯನ್ನು ಹೊರತೆಗೆಯಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೋಚ್ನ್ನು ಮುಚ್ಚಿ ನಾಯಿಯನ್ನು ಹೊರತೆಗೆಯಲು ಪ್ರಯತ್ನಿಸುವುದರಿಂದ ಪ್ರಯಾಣಿಕರು ತಮ್ಮ ಲಗೇಜ್ನೊಂದಿಗೆ ಕಾಯಬೇಕಾಯಿತು. ಈ ಘಟನೆಯು ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ್ದು, ಸಾಮಾನ್ಯ ರೈಲು ಕಾರ್ಯಾಚರಣೆಯನ್ನು ಅಡ್ಡಿಪಡಿಸಿದೆ.
ಸೀಟಿಗೆ ಕಟ್ಟಿಹಾಕಿದ್ದ ನಾಯಿಯನ್ನು ಸುರಕ್ಷಿತವಾಗಿ ದರ್ಭಾಂಗಾ ನಿಲ್ದಾಣಕ್ಕೆ ಸಾಗಿಸಲಾಯಿತು. ಇನ್ನು ಅಲ್ಲಿಗೆ ಬಂದ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಪ್ರಾಣಿಯನ್ನು ವಶಕ್ಕೆ ತೆಗೆದುಕೊಂಡು, ಆರೈಕೆ ಮತ್ತು ಪುನರ್ವಸತಿಗಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ ಹಸ್ತಾಂತರಿಸಿದರು. (ಏಜೆನ್ಸೀಸ್)