ಕಳ್ಳತನ ಮಾಡಲು ತಡರಾತ್ರಿ ಮನೆಗೆ ನುಗ್ಗಿದ ವ್ಯಕ್ತಿ; ಬೆಳಗ್ಗೆ ನೋಡಿದರೆ ಶವವಾಗಿ ಪತ್ತೆ!; ಆಗಿದ್ದಾದರೂ ಏನು? | Dead

dk - 2025-03-24T193537.789
Published on

Dead: ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ಕಳ್ಳನೊಬ್ಬ ವ್ಯಕ್ತಿಯೊಬ್ಬ ಕಟ್ಟಡದ ಕಿಟಕಿಯಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಹೈದರಾಬಾದ್​ನ ಗಾಂಧಿಭವನದ ಹಿಂಭಾದಲ್ಲಿರುವ ಕಟ್ಟಡಕ್ಕೆ ಕಳ್ಳನೊರ್ವ ಭಾನುವಾರ ತಡರಾತ್ರಿ(ಮಾ.23) ನುಗ್ಗಿದ್ದಾನೆ. ಮೊದಲ ಮಹಡಿಯಲ್ಲಿ ಯಾರೋ ಓಡಾಡುತ್ತಿದ್ದಾರೆ ಎಂದು ಬಿಲ್ಡಿಂಗ್​ನ ಕೆಲವರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನು ತಿಳಿದ ಕಳ್ಳ ಕಟ್ಟಡದಿಂದ ತಪ್ಪಿಸಿಕೊಳ್ಳಲು ಕಿಟಕಿಯಿಂದ ಜಂಪ್​ ಮಾಡಿದ್ದಾನೆ.

ಆತ ಕುಡಿದಿದ್ದರಿಂದ ಎದ್ದು ಹೋಗುತ್ತಾನೆ ಎಂದು ಬಿಲ್ಡಿಂಗ್​ ಪಕ್ಕದ ನಿವಾಸಿಗಳು ಅಂದುಕೊಂಡಿದ್ದಾರೆ. ಆದರೆ, ಬೆಳಗ್ಗೆ ನೋಡಿದರೆ, ಕೆಳಗೆ ಬಿದ್ದ ಇತ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಶವಪರೀಕ್ಷೆಯ ವರದಿಯ ಆಧಾರದ ಮೇಲೆ ಅಗತ್ಯವಿದ್ದರೆ ಪ್ರಕರಣದ ವಿಭಾಗಗಳನ್ನು ಬದಲಾಯಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net