ಹಾಲು ಕೊಡುತ್ತಿದೆ ಗಂಡು ಮೇಕೆ! ಬಾಗಲಕೋಟೆಯಲ್ಲಿ ವೈಚಿತ್ರ್ಯ, ವಿಡಿಯೋ ವೈರಲ್​

male goat is giving milk
Published on

ಬಾಗಲಕೋಟೆ: ಇಲ್ಲೊಂದು ಗಂಡು ಮೇಕೆ ಹಾಲು ಕೊಡುತ್ತಿದೆ! ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಇಂತಹ ವೈಚಿತ್ರ್ಯ ಕಂಡು ಬಂದಿದ್ದು, ಗಂಡು ಮೇಕೆ ಹಾಲು ಕೊಡುವುದನ್ನ ಕಂಡ ಜನ ಬೆರಗಾಗಿದ್ದಾರೆ.

ಜಮಖಂಡಿ‌ನಗರದ ಟೀಚರ್ಸ್ ಕಾಲನಿಯ ನಿವಾಸಿ ಪರಶುರಾಮ ಭಜಂತ್ರಿ ಎನ್ನುವವರಿಗೆ ಸೇರಿದ ಮೂರು ವರ್ಷದ ಗಂಡು ಮೇಕೆಯೊಂದು ನಿತ್ಯ ಹಾಲು ಕೊಡುತ್ತಿದೆ. ಪ್ರತಿನಿತ್ಯ ಒಂದು ಸಣ್ಣ ಬಟ್ಟಲಿನಷ್ಟು ಹಾಲನ್ನು ಕುರಿಗಾಹಿ ಪರಶುರಾಮ ಅವರು ಕರೆಯುತ್ತಿದ್ದಾರೆ. ಪರಶುರಾಮ ಅವರು ಗಂಡು ಮೇಕೆಯಿಂದ ಹಾಲು ಕರೆಯುತ್ತಿರುವ ದೃಶ್ಯ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net