ಪ್ರೀತಿಸಿ ಮದ್ವೆಯಾದ ನಟ-ನಟಿ ಬದುಕಲ್ಲಿ ಬಿರುಗಾಳಿ: ಕಾರಿನಲ್ಲೇ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

aditya jayan
Published on

ತ್ರಿಶೂರ್: ಕಾರಿನಲ್ಲೇ ಕೈ ನರ ಕತ್ತರಿಸಿಕೊಂಡು ನಿದ್ರೆ ಮಾತ್ರೆ ಸೇವಿಸಿ ಕೋಮ ಸ್ಥಿತಿಯಲ್ಲಿರುವ ಟಿವಿ ಸೀರಿಯಲ್​ ನಟ ಆದಿತ್ಯ ಜಗನ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮಲಯಾಳಂ ಟಿವಿ ಸೀರಿಯಲ್​ನಲ್ಲಿ ಬಣ್ಣಹಚ್ಚಿದ್ದ ನಟ ಆದಿತ್ಯ ಜಯನ್, ಕೌಟುಂಬ ಕಲಹಕ್ಕೆ ಬೇಸತ್ತು ಭಾನುವಾರ ಸಂಜೆ ನಾಡುವಿಲಾಲ್ ಬಳಿ ಕಾರಿ ನಿಲ್ಲಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ನಟ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು 24ರಿಂದ 48 ತಾಸು ತೀವ್ರ ನಿಗಾಘಟಕದಲ್ಲಿ ಇಟ್ಟು ನೋಡಲಾಗುವುದು ಎಂದು ಳಿಸಿದ್ದರು. ಆದಿತ್ಯ ಜಯನ್​ ತನಗೆ ಕಿರುಕುಳ ಕೊಡುತ್ತಿದ್ದರು ಎಂದು ಇತ್ತೀಚಿಗೆ ಇವರ ಪತ್ನಿ, ನಟಿ ಅಂಬಿಲಿ ದೇವಿ ಆರೋಪ ಮಾಡಿದ್ದು ಭಾರಿ ಸುದ್ದಿಯಾಗಿತ್ತು.

'ಸೀತಾ' ಎಂಬ ಧಾರಾವಾಹಿಯಲ್ಲಿ ಆದಿತ್ಯ ಜಯನ್ ಮತ್ತು ಅಂಬಿಲಿ ದೇವಿ ಪತಿ-ಪತ್ನಿ ಪಾತ್ರ ನಿರ್ವಹಿಸಿದ್ದರು. ಈ ಧಾರಾವಾಹಿ ಶೂಟಿಂಗ್​ ವೇಳೆ ಇವರಿಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ, ಕೆಲವು ವರ್ಷಗಳಿಂದ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪತಿ ಆದಿತ್ಯ ಜಯನ್​ ಕಿರುಕುಳ ಕೊಡುತ್ತಿದ್ದಾರೆ ಎಂದು ಅಂಬಿಲಿ ಆರೋಪಿಸಿದ್ದರು. ಅಲ್ಲದೆ ವಿಚ್ಛೇದನ ಪಡೆಯಲೂ ನಿರ್ಧರಿಸಿದ್ದರು. ಈ ನಡುವೆ ಆದಿತ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net