'ಲವ್​ ಯೂ ರಚ್ಚು' ಸಿನಿಮಾ ಶೂಟಿಂಗ್​ ವೇಳೆ ದುರಂತ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

love u racchu
Published on

ಬೆಂಗಳೂರು: 'ಲವ್​ ಯೂ ರಚ್ಚು' ಸಿನಿಮಾ ಶೂಟಿಂಗ್​ ವೇಳೆ ಮಹಾ ದುರಂತ ಸಂಭವಿಸಿದ್ದು, ಫೈಟ್​ ಅಸಿಸ್ಟೆಂಟರ್​ ವಿವೇಕ್​(35) ಮೃತಪಟ್ಟಿದ್ದಾರೆ.

ನಟ ಅಜಯ್ ರಾವ್ ಮತ್ತು ನಟಿ ರಚಿತ ರಾಮ್ ನಟನೆಯ 'ಲವ್​ ಯೂ ರಚ್ಚು' ಕನ್ನಡ ಸಿನಿಮಾ ಶೂಟಿಂಗ್ ಸೋಮವಾರ ರಾಮನಗರದ ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ನಡೆಯುತ್ತಿತ್ತು. ಈ ವೇಳೆ ವಿದ್ಯುತ್​ ಅವಘಡ ಸಂಭವಿಸಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಈ ಪೈಕಿ ಫೈಟರ್​ ತಮಿಳುನಾಡು ಮೂಲದ ​ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬನಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಚಿತ್ರೀಕರಣ ವೇಳೆ ಮೆಟಲ್​ ರೋಪ್​ ಬಳಸಿದ್ದೇ ಅವಘಡಕ್ಕೆ ಕಾರಣ. ಹೈ ಟೆನ್ಶನ್​ ತಂತಿಗೆ ತಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಅವಘಡ ಸಂಭವಿಸುತ್ತದ್ದಂತೆ ಚಿತ್ರೀಕರಣ ನಿಲ್ಲಿಸಲಾಗಿದೆ. ರಾಮನಗರ ಪೊಲೀಸರು ಸ್ಟಂಟ್​​ ಮಾಸ್ಟರ್​ ವಿನೋದ್​  ಮತ್ತು ನಿರ್ದೇಶಕ ಶಂಕರ್​ ರಾಜ್​ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ನಾನಿರಲಿಲ್ಲ, ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಸ್ಥಳಕ್ಕೆ ಭೇಟಿ ನೀಡುವೆ ಎಂದು ನಿರ್ಮಾಪಕ ಗುರುದೇಶಪಾಂಡೆ​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net