ತಡರಾತ್ರಿ ಲಾಂಗ್ ಡ್ರೈವ್ ಹೊರಟ ಸ್ನೇಹಿತರು; ಕಾರು ಮರಕ್ಕೆ ಡಿಕ್ಕಿಯಾಗಿ 2 ಸಾವು, 3 ಜನರಿಗೆ ಗಾಯ

A long drive in a car with friends happened late at night
Published on

ಹೈದರಾಬಾದ್​​: ವಿದ್ಯಾರ್ಥಿಗಳು ರಾತ್ರಿ ವೇಳೆ ಪೋಷಕರಿಗೆ ಹೇಳದೆ ಮದ್ಯ ಸೇವಿಸಿ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾಗ ಅನಿರೀಕ್ಷಿತ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ನಡೆದಿದ್ದೇನು?: ಹೈದರಾಬಾದ್‌ನ ಅಲ್ವಾಲ್‌ನ ಇಬ್ಬರು ವಿದ್ಯಾರ್ಥಿಗಳಾದ ತುಷಾರ್ (18) ಮತ್ತು ಕಾರ್ಖಾನಾದ ಭವೇಶ್ ರಾವ್ ( 17) ಸಮೀರಪೇಟ್‌ನ ವಿಶ್ವವಿಶ್ವನಿ ಕಾಲೇಜಿನಲ್ಲಿ ಬಿಬಿಎ ಪ್ರಥಮ ವರ್ಷ ಓದುತ್ತಿದ್ದಾರೆ. ಇದೇ ಕಾಲೇಜಿನಲ್ಲಿ ಓದುತ್ತಿರುವ ತಮ್ಮ ಸ್ನೇಹಿತೆಯರಾದ ಬೊಳ್ಳಾರಿನ ಇಂದ್ರಕಾಂತಿ ಹರಿಪ್ರಿಯಾ, ರೂಬೆನ್ ಮತ್ತು ಫಿಲಿಪ್ ಜಾನ್ ಅವರೊಂದಿಗೆ ಶುಕ್ರವಾರ ರಾತ್ರಿ 11.40ಕ್ಕೆ ಬಲೆನೊ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದರು.

ನಡುರಸ್ತೆಯಲ್ಲಿ ಕೊಂಪಲ್ಲಿಯಲ್ಲಿ ಮದ್ಯ ಖರೀದಿಸಿ ಕಾರಿನಲ್ಲಿ ಮದ್ಯ ಸೇವಿಸಲು ಆರಂಭಿಸಿದ್ದಾರೆ.  ಅಲ್ಲಿಂದ ವಾಪಸಾಗುತ್ತಿದ್ದಾಗ ಶನಿವಾರ ಮುಂಜಾನೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತುಷಾರ್ ಮತ್ತು ಭಾವೇಶ್ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನ ಚಲಾಯಿಸುತ್ತಿದ್ದ ಹರಿಪ್ರಿಯಾ, ರೂಬೆನ್ ಮತ್ತು ಫಿಲಿಪ್ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಅಪಘಾತದ ವೇಳೆ ಕಾರು ಚಲಾಯಿಸುತ್ತಿದ್ದ ಫಿಲಿಪ್ ಜಾನ್ ಮದ್ಯದ ಅಮಲಿನಲ್ಲಿ ಇರಲಿಲ್ಲ. ಆದರೆ ಕಾರಿನಲ್ಲಿದ್ದ ಉಳಿದವರು ಮದ್ಯ ಸೇವಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೀಸರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net