

ಬೆಂಗಳೂರು: ಮಹಾಮಾರಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ನಾಳೆ(ಏ.27) ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಟೈಟ್ ರೂಲ್ಸ್ ಜಾರಿ ಆಗಲಿದೆ.
ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಸಲು ನಜರು ಮನೆಯಿಂದ ಹೊರಬೇಕು.10 ಗಂಟೆ ಬಳಿಕ ಎಲ್ಲವೂ ಬಂದ್ ಆಗಲಿದೆ. ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಆದರೆ, ಸರಕು ಸಾಗಣೆಗೆ ಅವಕಾಶ ಇರಲಿದೆ. ಕಟ್ಟಡ ಕಾಮಗಾರಿ ಎಂದಿನಂತೆ ಮುಂದುವರಿಯಲಿದೆ. ಟೈಟ್ ರೂಲ್ಸ್ ನಡುವೆಯೂ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಇದೆ. ಬಾರ್ನಲ್ಲಿ ಮದ್ಯ, ಹೋಟೆಲ್ನಲ್ಲಿ ಊಟ ಪಾರ್ಸೆಲ್ ತೆಗೆದುಕೊಳ್ಳಲು ಯಾವುದೇ ಅಡ್ಡಿ ಇಲ್ಲ.
ಉತ್ಪಾದನಾ ವಲಯ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ಕಟ್ಟಡ ಕಾಮಗಾರಿ ನಡೆಯಲಿದೆ. ಅಗತ್ಯ ಸೇವೆ ಇಲಾಖೆ ಸೇರಿ ಬ್ಯಾಂಕಿಂಗ್ ಕಚೇರಿಗಳು ತೆರೆದಿರುತ್ತವೆ.
ಇನ್ನು ಕಸಾಪ ಚುನಾವಣೆ ಸೇರಿ ಎಲ್ಲ ಚುನಾವಣೆಗಳನ್ನು 6 ತಿಂಗಳ ಕಾಲ ಸರ್ಕಾರ ಮುಂದೂಡುವಂತೆ ಆಯೋಗಕ್ಕೆ ಸರ್ಕಾರ ಮನವಿ ಮಾಡಿದೆ. ಸದ್ಯದಲ್ಲೇ ಜಿಪಂ ಮತ್ತು ತಾಪಂ ಚುನಾವಣಾ ಪ್ರಕ್ರಿಯೆ ಆರಂಭ ಆಗಬೇಕಿತ್ತು.
ಇನ್ನು 14 ದಿನ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ. ಮೆಟ್ರೋ ಸಂಚಾರ ಇರುವುದಿಲ್ಲ. ಮುಂದಿನ ಎರಡು ವಾರದಲ್ಲಿ ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ಮತ್ತೊಂದು ವಾರ ಬಿಗಿ ಕ್ರಮ ಮುಂದುವರಿಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.