ಅಂಚೆ ಪೆಟ್ಟಿಗೆಯಲ್ಲಿತ್ತು ಜೀವಂತ ಹಾವು! ಪತ್ರ ತೆಗೆಯಲು ಬಂದ ಅಂಚೆಯಣ್ಣನಿಗೆ ಬೆಳ್ಳಂಬೆಳಗ್ಗೆ ಶಾಕ್​

snake
Published on

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯನ್ನು ಸೋಮವಾರ ಬೆಳಗ್ಗೆ ತೆರೆಯುತ್ತಿದ್ದಂತೆ ಅಂಚೆಯಣ್ಣ ಅರೆಕ್ಷಣ ತಬ್ಬಿಬ್ಬಾಗಿದ್ದಾರೆ. ಅರೇ, ಅಂತಹದ್ದೇನಾಯ್ತು? ಅದರಲ್ಲಿ ವಿಚಿತ್ರ ಪತ್ರವೇನಾದರೂ ಇತ್ತೇ? ಎಂದು ನಿಮ್ಮ ಮನದಲ್ಲಿ ಮೂಡಬಹುದು. ಪೆಟ್ಟಿಗೆಯೊಳಗೆ ಇದ್ದಿದ್ದು ಪತ್ರವಷ್ಟೇ ಅಲ್ಲ, ಜೀವಂತ ಹಾವೂ ಇತ್ತು!

ಅಂಚೆ ಪೆಟ್ಟಿಗೆಯೊಳಗೆ ಹಾವು ಇರುವುದನ್ನ ಕಂಡ ಅಂಚೆಯಣ್ಣ ಬೆಚ್ಚಿಬಿದ್ದರು. ಕೂಡಲೇ ಉರಗ ಪ್ರೇಮಿ ಸ್ನೇಕ್ ಕಿರಣ್​ಗೆ ಫೋನ್ ಮಾಡಿ ಕರೆಸಲಾಯಿತು. ಐದು ಅಡಿ ಉದ್ದದ ಹಾವನ್ನು ಸುರಕ್ಷಿತವಾಗಿ ಹಿಡಿದ ಸ್ನೇಕ್ ಕಿರಣ್, ಇದು ಕಟ್ಟು ಹಾವು (ಕ್ಯಾಟ್ ಸ್ನೇಕ್) ಜಾತಿಗೆ ಸೇರಿದೆ. ಐದು ಬಣ್ಣಗಳಲ್ಲಿರುವ ಇವು ವಿಷಕಾರಿಯಲ್ಲ. ಸಾಮಾನ್ಯವಾಗಿ ಮರದ ಮೇಲೆ ವಾಸಿಸುವ ಇದು ಅಂಚೆ ಪೆಟ್ಟಿಗೆಯೊಳಗೆ ಸೇರಿದ್ದು ಆಶ್ಚರ್ಯ ಎಂದರು. ಬಳಿಕ ಹಾವನ್ನು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net