ಚರಂಡಿ ನೀರಿನ ಬಗ್ಗೆ ಪಕ್ಕದ್ಮನೆಯವರ ಜತೆ ಗಲಾಟೆ; ಚೂರಿ ಇರಿತಕ್ಕೆ ಸತ್ತೇ ಹೋದ ಮಹಿಳೆ...

Murder
Published on

ಕೇರಳ: ಮನೆ ಪಕ್ಕ ಹರಿಯುತ್ತಿದ್ದ ಚರಂಡಿ ನೀರಿನ ವಿಷಯಕ್ಕೆ ನೆರೆಮನೆಯವರ ಜತೆ ನಡೆದ ಗಲಾಟೆ, ಚೂರಿ ಇರಿತದವರೆಗೂ ಹೋಗಿ ಒಬ್ಬರ ಸಾವಿನಲ್ಲಿ ಪರ್ಯಾವಸಾನಗೊಂಡಿದೆ.

ಕೇರಳದ ಕೊಲ್ಲಂ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಉಮೇಶ್ ಎಂಬವರ ಮನೆಯ ಚರಂಡಿ ನೀರು ಪಕ್ಕದ ಅಭಿರಾಮಿ ಎಂಬವರ ಮನೆ ಹತ್ತಿರ ಹರಿಯುತ್ತಿತ್ತು. ಈ ಬಗ್ಗೆ ಎರಡೂ ಮನೆಯವರ ಮಧ್ಯೆ ಗಲಾಟೆ ನಡೆದಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳುವಂತೆ ಇಬ್ಬರಿಗೂ ಹೇಳಿ ಕಳುಹಿಸಿದ್ದರು.

ಆದರೆ ಮನೆಗೆ ಮರಳಿದ ಎರಡೂ ಮನೆಯವರು ಮತ್ತೆ ಅದೇ ವಿಷಯಕ್ಕೆ ಜಗಳವಾಡಿಕೊಂಡಿದ್ದು, ಇದರಿಂದ ಸಿಟ್ಟಾದ ಉಮೇಶ್ ಚಾಕು ಸಹಿತ ಸೀದಾ ಮನೆಯಿಂದ ಹೊರಬಂದು ಅಭಿರಾಮಿಗೆ ಇರಿದಿದ್ದಾರೆ. ಪರಿಣಾಮ ಗಂಭೀರ ಗಾಯಕ್ಕೊಳಗಾದ ಅಭಿರಾಮಿ (24) ಮೃತಪಟ್ಟಿದ್ದರೆ, ಆಕೆಯ ತಾಯಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net