ರೋಣದಲ್ಲಿ ಅಜ್ಜಿ-ಅಜ್ಜಿಯರಿಂದ ಚಿಣ್ಣರಿಗೆ ಪಾಠ

20 RON 1
Published on

ರೋಣ: ಹಿರಿಯರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಅಜ್ಜ-ಅಜ್ಜಿಯಂದಿರ ದಿನ ಆಚರಿಸುತ್ತಾ ಬಂದಿದ್ದೇವೆ. ಹಿರಿಯರಿಗೆ ತಲೆಬಾಗಿ ನಡೆಯಬೇಕು ಎನ್ನುವುದು ನಮ್ಮ ಸಂಸ್ಕೃತಿ, ಪರಂಪರೆಯ ಹಿರಿಮೆಯಾಗಿದೆ ಎಂದು ಎಲ್.ಐ. ದಿಂಡೂರ ಸಂಸ್ಥೆಯ ಅಧ್ಯಕ್ಷ ಶಶಿಧರ ಎಲ್. ದಿಂಡೂರ ಹೇಳಿದರು.
ಸೋಮವಾರ ಪಟ್ಟಣದ ಎಲ್.ಐ. ದಿಂಡೂರ ಪ್ರೌಢಶಾಲೆಯಲ್ಲಿ ಅಜ್ಜ ಅಜ್ಜಿಯಂದಿರ ದಿನಾಚರಣೆ, ರಕ್ಷಾಬಂಧನ ಹಾಗೂ ಸಂಸ್ಥೆಯ ಗೌರವಾಧ್ಯಕ್ಷ ಎಲ್.ಐ. ದಿಂಡೂರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಅಜ್ಜ-ಅಜ್ಜಿಯರು ಭಾಗವಹಿಸಿದ್ದರು. ಸೂಜಿಯಲ್ಲಿ ದಾರ ಪೋಣಿಸುವುದು, ನೆಟ್ ಜೋಡಿಸುವುದು, ಬೊಗಸೆಯಿಂದ ಬಾಟಲಿಯಲ್ಲಿ ನೀರು ತುಂಬಿಸುವುದು, ಬಣ್ಣದ ಮುತ್ತುಗಳನ್ನು ಬೇರ್ಪಡಿಸುವುದು, ಅಜ್ಜ-ಮೊಮ್ಮಗಳು ಸೇರಿ ರಂಗೋಲಿ ಬಿಡಿಸುವುದು, ಪೇಪರ್ ಕಪ್ ಊದುವುದು, ಪೇಪರ್ ಕಪ್‌ನಿಂದ ಪಿರಾಮಿಡ್ ರಚನೆ ಮೊದಲಾದ ಮನರಂಜನಾ ಆಟಗಳನ್ನು ಏರ್ಪಡಿಸಲಾಗಿತ್ತು.
ನಿವೃತ್ತ ಶಿಕ್ಷಕ ವಿ.ಎಚ್. ಭೀಮನಗೌಡ, ಈಶ್ವರೀಯ ವಿವಿಯ ಶಾರದಾ, ಶತಾಯುಷಿ ಸಂಗಮ್ಮ ಗಡಗಿ, ವೀರನಗೌಡ ಭೀಮನಗೌಡ್ರ, ಎಸ್.ಬಿ. ಮುಗನಗೌಡ್ರ, ಪ್ರಿಯಾ ಅವ್ವನ್ನವರ, ರುಬಿಯಾ ಬೇಗಂ, ರೇಣುಕಾ ಜಡಿ, ನಿವೇದಿತಾ ಬೇವಿನಕಟ್ಟಿ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net