ಅಪ್ಪನನ್ನೇ ಹೊರಹಾಕಿದ ಮಗಳಿಗೆ ತಕ್ಕಪಾಠ!

7-67f80c550f42f
Published on

ಚಿಕ್ಕಬಳ್ಳಾಪುರ: ಮನೆಗಾಗಿ ತಂದೆಯನ್ನೇ ಮನೆಯಿಂದ ಹೊರಹಾಕಿದ್ದ ಮಗಳಿಗೆ ಇಲ್ಲಿನ ಅಧಿಕಾರಿಗಳು ತಕ್ಕಪಾಠ ಕಲಿಸಿದ್ದಾರೆ.

ಶಾಂತಿನಗರದ ನಿವಾಸಿ ವೆಂಕಟರೋಣಪ್ಪ (72) ಅವರನ್ನು ಅಂಗನವಾಡಿ ಶಿಕ್ಷಕಿಯಾಗಿರುವ ಪುತ್ರಿ ಸುಬ್ಬುಲಕ್ಷ್ಮೀ ಬೀದಿಗೆ ತಳ್ಳಿದ್ದಳು. ಈ ಬಗ್ಗೆ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ದಾಖಲೆಗಳ ಪ್ರಕಾರ ಮನೆಯನ್ನು ವೆಂಕಟರೋಣಪ್ಪಗೆ ಬಿಟ್ಟು ಕೊಡಬೇಕು. ಹಾಗೆಯೇ ಪ್ರತಿ ತಿಂಗಳು 5000 ರೂ. ನೀಡಬೇಕು ಎಂದು ಆದೇಶ ನೀಡಿದ್ದಾರೆ. ಇದರಂತೆ ತಹಸೀಲ್ದಾರ್ ಅನಿಲ್ ಪೊಲೀಸರೊಂದಿಗೆ ಬಂದು ಮಗಳಿಂದ ವೃದ್ಧನಿಗೆ ಮನೆ ಬಿಡಿಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net