

ಮೂಗೂರು: ಮಕ್ಕಳಲ್ಲಿನ ಕಲಿಕಾ ಪ್ರತಿಭೆಗೆ ಹಲವಾರು ಶೈಕ್ಷಣಿಕ ಚಟುವಟಿಕೆಗಳು ಪೂರಕವಾಗಿದ್ದು, ಮಕ್ಕಳ ಕಲಿಕಾ ಪ್ರೇರಣೆ ಹಾಗೂ ಬಲವರ್ಧನೆಗೆ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಮೂಗೂರು ಕ್ಲಸ್ಟರ್ ಸಿಆರ್‌ಪಿ ಶಿವರಾಜು ಹೇಳಿದರು.
ಮೂಗೂರು ಸಮೀಪದ ಹ್ಯಾಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎಫ್‌ಎನ್‌ಎಲ್ ಆಧಾರಿತ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕಾ ಹಬ್ಬದ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸುವ ಮೂಲಕ ಅವರಲ್ಲಿರುವ ಕೌಶಲತೆ ಹೊರತರಬಹುದು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ವಿನೂತನ ಚಟುವಟಿಕೆಯುಳ್ಳ ಕಲಿಕಾ ಹಬ್ಬ ಮಕ್ಕಳ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುವುದರೊಂದಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ. ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಉತ್ತಮ ಶಿಕ್ಷಣ ಕಲಿಕಾ ಹಬ್ಬಕ್ಕೆ ಸ್ಪೂರ್ತಿ ತರಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಬಾಲು ಪುಟ್ಟಬುದ್ಧಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ನಿಂಗರಾಜು, ಮೂಗೂರು ಸಿದ್ದರಾಜು , ಮುಖ್ಯ ಶಿಕ್ಷಕ ಗೋವಿಂದ ರಾಜು, ಶಿವಪ್ರಸಾದ್, ನಾಗೇಂದ್ರ, ಸಹ ಶಿಕ್ಷಕರು ಹಾಗೂ ಪಾಲಕರು, ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.