ಸುಗಮ ಕಲಾಪಕ್ಕೆ ವಕೀಲರ ಸಹಕಾರ ಅಗತ್ಯ

02..ಪಿ ವೈ ಪಿ.02
ಪಿರಿಯಾಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸಮೀವುಲ್ಲಾ ಮಾತನಾಡಿದರು. ನ್ಯಾಯಾಧೀಶೆ ಶ್ವೇತಾ, ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಲಕ್ಷ್ಮೀ ಗಾವಂಕರ್, ಶ್ರೀಧರ್, ಮಹೇಶ್ ಇತರರು ಇದ್ದರು.
Published on

ಪಿರಿಯಾಪಟ್ಟಣ: ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಭರವಸೆಯೊಂದಿಗೆ ಹೆಜ್ಜೆ ಇರಿಸಬೇಕು ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸಮೀವುಲ್ಲಾ ಸಲಹೆ ನೀಡಿದರು.


ಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ವಕೀಲರ ಸಂಘ ಆಯೋಜಿಸಿದ್ದ ಹೊಸ ವರ್ಷ ಆಚರಣೆ ಅಂಗವಾಗಿ ಶುಭಾಶಯಗಳ ವಿನಿಮಯ ಕಾರ್ಯಕ್ರಮದಲ್ಲಿ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಶುಭ ಕೋರಿ ಮಾತನಾಡಿದರು. ನ್ಯಾಯಾಲಯ ಸುಗಮವಾಗಿ ಕಾರ್ಯ ಕಲಾಪ ನಡೆಸಲು ವಕೀಲರ ಸಹಕಾರ ಅತ್ಯಗತ್ಯ, ಈ ವರ್ಷ ವಕೀಲರು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.


ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾ ಮಾತನಾಡಿ, ವಕೀಲರು ಹೊಸ ಹುರುಪಿನೊಂದಿಗೆ, ಹೊಸ ಭರವಸೆಯೊಂದಿಗೆ ಕರ್ತವ್ಯ ನಿರ್ವಹಿಸುವಂತಾಗಲಿ ಮತ್ತು ನ್ಯಾಯಾಲಯಕ್ಕೆ ಅಗತ್ಯ ಸಹಕಾರ ನೀಡಲಿ ಎಂದು ಕೋರಿದರು.


ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಸರ್ಕಾರಿ ಸಹಾಯಕ ಅಭಿಯೋಜಕರಾದ ಲಕ್ಷ್ಮೀ ಗಾವಂಕರ್, ಶ್ರೀಧರ್, ಮಹೇಶ್, ಹಿರಿಯ ವಕೀಲರಾದ ಗೋವಿಂದ ಗೌಡ, ಬಿ.ವಿ.ಜವರೇಗೌಡ, ಎಸ್.ಎಂ.ಪುರುಷೋತ್ತಮ್ ಮಾತನಾಡಿದರು.


ವಕೀಲರ ಸಂಘದ ಪದಾಧಿಕಾರಿಗಳಾದ ಶಂಕರ್, ಹರೀಶ್, ಸುಧೀಶ್, ಶಾಂಭವಿ, ಗುರುಪ್ರಸಾದ್, ರಘುರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net