ಈಸೂರಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

15 ಎಸ್ಕೆಪಿ 2 ಈಸೂರು
ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವೀರೇಶ್, ಧರಣಿಕುಮಾರ್, ಬೇಗೂರು ಶಿವಪ್ಪ, ಸುರೇಶ್ ಇತರರಿದ್ದರು.
Published on

ಶಿಕಾರಿಪುರ: ಸಮೀಪದ ಈಸೂರಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಟ್ರಾೃಕ್ಟರ್‌ಗಳ ಮೇಲೆ ಕನ್ನಡ ರಾಜರಾಜೇಶ್ವರಿ ಮೆರವಣಿಗೆ ನಡೆಯಿತು. ನೆಹರು ವೃತ್ತ, ಹುತಾತ್ಮರ ಸ್ಮಾರಕ, ಅಂಬೇಡ್ಕರ್ ಬೀದಿ ಮೂಲಕ ರಂಗಮಂದಿರ ತಲುಪಿತು. ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಶಾಲಾ ಕಾಲೇಜಿನ ಮಕ್ಕಳು ಸ್ವಾತಂತ್ರೃ ಯೋಧರ, ಹುತಾತ್ಮರ, ಶರಣರು, ಮಹಾತ್ಮ ಗಾಂಧೀಜಿ ಮುಂತಾದ ಸಾಧಕರ ವೇಷ ಧರಿಸಿದ್ದರು. ಸ್ತಬ್ಧಚಿತ್ರಗಳು ಕಣ್ಮನ ಸೆಳೆದವು. ಕನ್ನಡ ಪರ ಘೋಷಣೆಗಳನ್ನು ಕೂಗಲಾಯಿತು. ಬಾವುಟಗಳು ರಾರಾಜಿಸಿದವು. ರಾಜ್ಯೋತ್ಸವ ಪ್ರಯುಕ್ತ ಭಜನಾ ಸ್ಪರ್ಧೆ ಆಯೋಜಿಸಲಾಗಿತ್ತು.

ಕನ್ನಡ ಸಂಘ, ವಿವಿಧ ಸಂಘಟನೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕನ್ನಡ ಸಂಘದ ಗೌರವಾಧ್ಯಕ್ಷ ವೀರೇಶ್, ಅಧ್ಯಕ್ಷ ಧರಣಿಕುಮಾರ್, ಜನಪದ ಕಲಾವಿದ ಬೇಗೂರು ಶಿವಪ್ಪ, ಸುರೇಶ್, ಸತೀಶ್, ಪ್ರಶಾಂತ್, ನಾಗರಾಜ ಸ್ವಾಮಿ, ರಮೇಶ್, ಕನ್ನಡ ಸಂಘದ ಪದಾಧಿಕಾರಿಗಳು, ಶಿಕ್ಷಕರು, ಜನಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net