ಧರಣಿಗೆ ಸಜ್ಜಾದ ಸಾರಿಗೆ ನೌಕರರು: ಸೋಮವಾರ ಬಸ್​ ಸಂಚಾರದಲ್ಲಿ ವ್ಯತ್ಯಯ?

ksrtc
Published on

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರ ಪ್ರತಿಭಟನೆ‌ ಕೂಗು ಕೇಳಿ ಬರುತ್ತಿದ್ದು, ಸೆ.20ರಂದು ನಗರದ ಫ್ರೀಡಂ ಪಾರ್ಕ್​​ನಲ್ಲಿ ಧರಣಿ ನಡೆಯಲಿದೆ. ಅಂದು ಬಸ್​ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದ್ದು, ಪ್ರಯಾಣಿಕರು ಮುಂಜಾಗ್ರತೆ ವಹಿಸುವುದು ಸೂಕ್ತ.

6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಈ ಹಿಂದೆ ಕೆಲಕ್ಕೂ ಹಾಜರಾಗದೆ ದೀರ್ಘಾವಧಿ ಮುಷ್ಕರ ನಡೆಸಿದ್ದರು. ಇದೀಗ ಮತ್ತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ವತಿಯಿಂದ ಹಲವು ಬೇಡಿಕೆ ಈಡೇರಿಸುಂತೆ ಆಗ್ರಹಿಸಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಬಿಎಂಟಿಸಿ, ಕೆಎಸ್ಆರ್​ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದು, ಸೋಮವಾರ ಬಸ್​​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ನೌಕರರ ಬೇಡಿಕೆ ಏನು?

  • ಏಪ್ರಿಲ್ 2021ರ ಮುಷ್ಕರದ ವೇಳೆ ಕೆಲಸದಿಂದ ವಜಾಗೊಂಡ ಎಲ್ಲ ಕಾರ್ಮಿಕರನ್ನೂ ಮತ್ತೆ ಕೆಲಸಕ್ಕೆ ನೇಮಿಸಬೇಕು. ಸೇವೆಯಿಂದ ಕೈಬಿಟ್ಟ ಟ್ರೈನಿ ನೌಕರರ ಪುನರ್ ನೇಮಕ ಮಾಡಬೇಕು.
  • ವಿಭಾಗದಿಂದ ವಿಭಾಗಕ್ಕೆ ವರ್ಗಾವಣೆ ಮಾಡಿರುವ ನೌಕರರನ್ನು ತೆರವು ಮಾಡಬೇಕು. ಮುಷ್ಕರದ ಅವಧಿಯಲ್ಲಿ ಎಲ್ಲ ರೀತಿಯ ಶಿಸ್ತು ಪ್ರಕ್ರಿಯೆಯನ್ನ ನಿಲ್ಲಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net