

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಚೆನ್ನಾಗಿರಬೇಕು. ಅವರಿಬ್ಬರೂ ನಮ್ಮ ಆಸ್ತಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅರೆ, ಇದ್ಹೇನಿದು ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ಈಶ್ವರಪ್ಪಗೆ ಆಸ್ತಿನಾ? ಅದ್ಹೇಗೆ ಎಂದೆಲ್ಲ ಹುಬ್ಬೇರಿಸಬೇಡಿ. ನಮ್ಮ ಆಸ್ತಿ ಅಂದಿದ್ದರ ಒಳಾರ್ಥ ಬೇರೆಯೇ ಇದೆ.
ಕರೊನಾ ರೂಲ್ಸ್ಗೂ ಡೋಂಟ್ ಕೇರ್. ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಮತ್ತು ದೇವೇಗೌಡರು ನಮ್ಮ ಆಸ್ತಿ. ಅವರು ಚೆನ್ನಾಗಿರಲಿ ಎಂಬುದು ನಮ್ಮ ಭಾವನೆ. ಅದಕ್ಕೆ ಈಗ ಪಾದಯಾತ್ರೆಯನ್ನ ಮಾಡಬೇಡಿ ಎಂದಿದ್ದೇವೆ. ಮಾಡೇ ಮಾಡ್ತೇವೆ ಅಂದ್ರೆ ಅವರಿಗೆ ಸೇರಿದ್ದು. ಮುಂದೆ ಅದರ ಬಗ್ಗೆ ನೋಡೋಣ ಎಂದರು.