

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರ ಮುಂಗೈಗೆ ಪೆಟ್ಟಾಗಿದ್ದು, ಪರಿಣಾಮ ಇಂದು ತಡವಾಗಿ ಭಾರತ್ ಜೋಡೋ ಪಾದಯಾತ್ರೆಗೆ ತೆರಳಿದ್ದಾರೆ.
ನಿನ್ನೆ(ಶುಕ್ರವಾರ) ದೆಹಲಿಯ ಇಡಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿ ಡಿಕೆಶಿ ವಾಪಸ್ ಆಗಿದ್ದರು. ಮನೆ ಬಳಿ ಕೈ ಇಟ್ಟು ಏಳುವ ಸಂದರ್ಭದಲ್ಲಿ ಏರ್ ಕ್ರ್ಯಾಕ್ ಆಗಿದೆ.
ನೋವಿದ್ದ ಕಾರಣ ಇಂದು ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಂಡರು. ಎಕ್ಸ್ರೇ ತೆಗೆದಾಗ ಮುಂಗೈನಲ್ಲಿ ಸಣ್ಣ ಏರ್ ಕ್ರ್ಯಾಕ್ ಆಗಿರುವುದು ಗೊತ್ತಾಗಿದೆ.
ವೈದ್ಯರು ಚಿಕಿತ್ಸೆ ನೀಡಿ ಕೈಗೆ ಬ್ಯಾಂಡೇಜ್ ಹಾಕಿದ್ದಾರೆ. ಹಾಗಾಗಿ ತಡವಾಗಿ ಅಂದರೆ ಮಧ್ಯಾಹ್ನ 12.30ರ ವೇಳೆಗೆ ಭಾರತ್ ಜೋಡೋ ಪಾದಯಾತ್ರೆಯನ್ನ ಸೇರಿಕೊಂಡಿದ್ದಾರೆ.