

ಕೊಪ್ಪಳ: ಮನೆಯಲ್ಲಿ ಆಟವಾಡಿಕೊಂಡಿದ್ದ 5 ವರ್ಷದ ಬಾಲಕಿಗೆ 1 ರೂಪಾಯಿ ನಾಣ್ಯಕೊಟ್ಟ ಕಾಮುಕನೊಬ್ಬ ಆಕೆಯನ್ನ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ ಅಲಿಯಾಸ್ ಸೂರಿ ಆರೋಪಿ. ಬಾಲಕಿಯ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದ ಸುರೇಶ, ಬಾಲಕಿಗೆ ತಿಂಡಿ ತಿನ್ನಲು 1 ರೂಪಾಯಿ ಕೊಟ್ಟಿದ್ದಾನೆ. ಬಳಿಕ ಆಕೆಯನ್ನ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ತಾಯಿ ದೂರು ನೀಡಿದ್ದು, ಆರೋಪಿಯನ್ನ ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.