ವಿಶ್ವಸಂಸ್ಥೆಗೆ ಕನ್ನಡತಿ, ಕೋಲಾರದ ಡಾ.ಅಶ್ವಿನಿ ನೇಮಕ

dr ashwini
Published on

ಕೋಲಾರ: ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ (ಯುಎನ್​ಎಚ್​ಆರ್​ಸಿ) ಕೋಲಾರ ಜಿಲ್ಲೆಯ ಡಾ. ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ.

ಕೋಲಾರ ತಾಲೂಕಿನ ಕಸಬಾ ಕುರುಬರಹಳ್ಳಿಯ ವಿ.ಪ್ರಸನ್ನಕುಮಾರ್​ ಮತ್ತು ಜಯಮ್ಮ ಅವರ ಪುತ್ರಿ ಅಶ್ವಿನಿ. ಬೆಂಗಳೂರಿನ ಮೌಂಟ್​ ಕಾರ್ಮೆಲ್​ ಕಾಲೇಜಿನಲ್ಲಿ ಪದವಿ, ಬೆಂಗಳೂರಿನ ಸೇಂಟ್​ ಜೋಸೆಫ್​ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಂಪಿಲ್​, ಪಿಎಚ್​ಡಿ ಪದವಿಯನ್ನು ದೆಹಲಿಯ ಜವಹರಲಾಲ್​ ನೆಹರು ವಿಶ್ವವಿದ್ಯಾಲಯ (ಜೆಎನ್​ಯು) ಪಡೆದಿದ್ದಾರೆ.

ಮೌಂಟ್​ ಕಾರ್ಮೆಲ್​ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದ ಅಶ್ವಿನಿ, ನಂತರ ಆಮ್ನೆಸ್ಟಿ ಇಂಟರ್​ನ್ಯಾಷನಲ್​ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಒಡಿಶಾ, ಛತ್ತೀಸ್​ಘಡ ರಾಜ್ಯಗಳ ಆದಿವಾಸಿಗಳ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಆದಿವಾಸಿಗಳ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ನಾಲ್ಕು ವರ್ಷಗಳಿಂದ ಸೇಂಟ್​ ಜೋಸೆಫ್​​ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ನೇಮಕವಾಗಿದ್ದಾರೆ. ಜಿನೀವಾ ಮೂಲದ 47 ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಇವರ ನೇಮಕಾತಿ ಅನುಮೋದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net