ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ

kodishri
Published on

ಹಾಸನ: ಅರಸೀಕೆರೆಯ ಮಾಡಾಳು ಗೌರಮ್ಮ ಪುಣ್ಯ ಕ್ಷೇತ್ರದಲ್ಲಿ ಕೋಡಿ ಮಠದ ಶ್ರೀಗಳು ಭವಿಷ್ಯವಾಣಿ ನುಡಿದಿದ್ದು, ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ. ಸಾವುಗಳು ಹೆಚ್ಚುತ್ತವೆ ಎಂದು ಹೇಳಿದರು.

ಕರೊನಾ ಇನ್ನೂ ಮೂರ್ನಾಲ್ಕು ವರ್ಷ ರೂಪಾಂತರಗೊಳ್ಳುತ್ತಾ ಹೋಗುತ್ತೆ. ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ. ಸಾವುಗಳು ಹೆಚ್ಚುತ್ತವೆ ಎಂದರು.

ನಾನು ಒಂದೂವರೆ ವರ್ಷದ ಹಿಂದೆ ಜಗತ್ತಿನ ಭೂಪಟದಲ್ಲಿ ಒಂದು ದೇಶ ಕಾಣೆಯಾಗುತ್ತೆ ಎಂದು ಹೇಳಿದ್ದೆ. ಆಫ್ಘಾನಿಸ್ತಾನ ರಾಷ್ಟ್ರಕ್ಕೆ ಆ ಪರಿಸ್ಥಿತಿ ಬಂದಿದೆ. ಆ ಭಯ ಇಡೀ ಜಗತ್ತಿನಾದ್ಯಂತ ಇದೆ. ಆ ಭಯ ಇನ್ನೂ ಹೆಚ್ಚಲಿದೆ ಎಂದು ಕೋಡಿಶ್ರೀಗಳು ಹೇಳಿದರು.

ಕರೊನಾದಂತಹ ಕೆಟ್ಟ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸೋದು ಬೇಡ ಅಂತ ಹೇಳಲು ಸ್ವಾಮೀಜಿಗಳು ಬಂದಿದ್ದರು. ಆದ್ರೆ ಅವರ ಮಾತುಗಳನ್ನ ಧಿಕ್ಕರಿಸಿದರು. ಸದ್ಯದಲ್ಲೇ ಅದರ ಫಲವನ್ನ ಇವರೆಲ್ಲ ಉಣ್ಣುತ್ತಾರೆ ನೋಡಿ. ಹೇಗೆ ಅಂತ ಈಗ ಹೇಳಲ್ಲ, ಎಲ್ಲ ಕಾದು ನೋಡಿ ಎಂದು ಕೋಡಿಶ್ರೀಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net