ತಡರಾತ್ರಿ ಹೃದಯಾಘಾತ: ಜನತಾ ಕಾಂಗ್ರೆಸ್ ಶಾಸಕ ದೇವವ್ರತ ಸಿಂಗ್ ನಿಧನ

khairagarh mla devvrat singh
Published on

ರಾಯ್​ಪುರ್ (ಚತ್ತೀಸ್​​​ಗಢ): ರಾಜನಂದಗಾಂವ್​ನ ಖೈರಗಢ ವಿಧಾನಸಭಾ ಕ್ಷೇತ್ರದ ಜನತಾ ಕಾಂಗ್ರೆಸ್​ ಶಾಸಕ ದೇವವ್ರತ ಸಿಂಗ್ ಹೃದಯಾಘಾತದಿಂದ ನಿಧನರಾದರು. ಇವರಿಗೆ 52 ವರ್ಷ ವಯಸ್ಸಾಗಿತ್ತು.

ಬುಧವಾರ ತಡರಾತ್ರಿ 3 ಗಂಟೆ ಸುಮಾರಿನಲ್ಲಿ ದೇವವ್ರತ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು.

2018ರಲ್ಲಿ ಮಾಜಿ ಸಿಎಂ ಅಜಿತ್ ಜೋಗಿ ನೇತೃತ್ವದ ಜೆಸಿಸಿ ಪಕ್ಷ ಸೇರ್ಪಡೆಯಾಗಿದ್ದ ದೇವವ್ರತ ಸಿಂಗ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖೈರಗಢ ಕ್ಷೇತ್ರದ ಜನತಾ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ ದೇವವ್ರತ ಸಿಂಗ್ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್​ನಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net