ಎಚ್​ಸಿಎಲ್​ನಲ್ಲಿ 96 ಹುದ್ದೆಗೆ ನೇಮಕ: ITI ಮಾಡಿದವರಿಗೆ ಉದ್ಯೋಗಾವಕಾಶ

HCL Hindustan Copper Limited
Published on

ಐಟಿಐ ಪೂರೈಸಿದ ವಿದ್ಯಾರ್ಥಿಗಳಿಗೆ ಶಿಶಿಕ್ಷು ತರಬೇತಿ ನೀಡಲು ಹಿಂದುಸ್ತಾನ್​ ಕಾಪರ್​ ಲಿಮಿಟೆಡ್​ನಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಭಾರತೀಯ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದು. ಕೈಗಾರಿಕಾ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮತ್ತು ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಮಲಂಜ್​ಖಂಡ್​ ಕಾಪರ್​ ಪ್ರಾಜೆಕ್ಟ್​ನಡಿ ಅಪ್ರೆಂಟೀಸ್​ಶಿಪ್​ ತರಬೇತಿ ನಡೆಯಲಿದೆ.

ಹುದ್ದೆಗಳ ವಿವರ: ಎಲೆಕ್ಟ್ರೀಷಿಯನ್​-22, ಇನ್​ಸ್ಟ್ರುಮೆಂಟ್​ ಮೆಕ್ಯಾನಿಕ್-2, ಮೆಕ್ಯಾನಿಕಲ್​ ಡೀಸೆಲ್​-11, ವೆಲ್ಡರ್​-14, ಫಿಟ್ಟರ್-14, ಟರ್ನರ್​/ಮೆಕ್ಯಾನಿಸ್ಟ್​-6, ಎಸಿ ಮತ್ತು ರೆಫ್ರಿಜರೇಷನ್​ ಮೆಕ್ಯಾನಿಕ್-2, ಡ್ರಾಟ್ಸ್​ಮನ್​ ಮೆಕ್ಯಾನಿಕಲ್​-3, ಡ್ರಾಟ್ಸ್​ಮನ್​ ಸಿವಿಲ್​-1, ಸರ್ವೇಯರ್​-5, ಕಾರ್ಪೆಂಟರ್​-3, ಪ್ಲಂಬರ್​-2, ಮಸೊನ್​ (ಬಿಲ್ಡಿಂಗ್​ ಕನ್​ಸ್ಟ್ರಕ್ಟರ್​)-1, ಶಾಟ್​ಫೈರರ್​/ಬ್ಲಾಸ್ಟ್​ರ್​-5, ಮೇಟ್​ (ಮೈನ್ಸ್​)-ಫ್ರಶರ್​-5 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಶೈಕ್ಷಣಿಕ ಅರ್ಹತೆ: 10ನೇ ತರಗತಿ ಉತ್ತೀರ್ಣರಾದವರು ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಇನ್​ಸ್ಟ್ರುಮೆಂಟಲ್​/ ಎಲೆಕ್ಟ್ರಾನಿಕ್ಸ್​/ ಮೆಕ್ಯಾನಿಕ್​ ಟ್ರೇಡ್​/ ವೆಲ್ಡರ್​/ ಫಿಟ್ಟರ್​/ಟರ್ನರ್​/ಕಾರ್ಪೆಂಟರ್​/ಪ್ಲಂಬರ್​ ವಿಭಾಗಗಳಲ್ಲಿ ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಶಾಟ್​ಫೈರರ್​/ಬ್ಲಾಸ್ಟ್​ರ್​ ಮತ್ತು ಮೇಟ್​ (ಮೈನ್ಸ್​)-ಫ್ರೆಶರ್​ ಹುದ್ದೆಗೆ ಕ್ರಮವಾಗಿ 2 ಮತ್ತು 3 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಉಳಿದೆಲ್ಲ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 2018ರ ಬ್ಯಾಚ್​ಗಿಂತ ಮೊದಲು ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳು ಈ ಮೊದಲು ಎಲ್ಲೂ ಶಿಶಿಕ್ಷು ತರಬೇತಿ ಪಡೆದಿಲ್ಲ ಎಂದು ಅಫಿಡವಿಟ್​ ಸಲ್ಲಿಸಬೇಕು.

ವಯೋಮಿತಿ: 1.4.2022ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಗರಿಷ್ಠ ವಯೋಮಿತಿ 25 ವರ್ಷ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಸಿ ಅಭ್ಯರ್ಥಿಗೆ 5 ವರ್ಷ, ಇತರ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗೆ 10 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಕಂಪನಿಯ ನಿಯಮದ ಅನುಸಾರ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸ್ಟೈಪೆಂಡ್​ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅರ್ಜಿಗಳನ್ನು ಪರಿಷ್ಕರಿಸಿ ಶಾರ್ಟ್​ ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಮಲ್ಟಿಪಲ್​ ಚಾಯ್ಸ್​ ಲಿಖಿತ ಪರೀಕ್ಷೆ ನಡೆಸಲಾಗುವುದು. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾದರೆ ಶೈಕ್ಷಣಿಕ ಅರ್ಹತೆ ಅನುಸಾರ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಸಲಾಗುವುದು. ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಇರುವುದಿಲ್ಲ. ಲಿಖಿತ ಪರೀಕ್ಷೆಗೆ ಹಾಜರಾಗಲು ಯಾವುದೇ ಭತ್ಯೆ ನೀಡುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ: ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಂಡು ನಂತರ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸತಕ್ಕದ್ದು. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 21.5.2022

ಅಧಿಸೂಚನೆಗೆ: https://bit.ly/385pdWF

ಮಾಹಿತಿಗೆ: https://bit.ly/3vlxg9u

ಲಿಖಿತ ಪರೀಕ್ಷೆ ನಡೆಯುವ ದಿನಾಂಕ ಮತ್ತು ಸ್ಥಳ: 31.7.2022

“DAV HCL Public School, Malanjkhand; Malanjkhand Copper Project, District- Balaghat (Madhya Pradesh) 481116

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net