

ಬೆಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ರಾಜ್ಯ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ವಿವರ
- ಕೇಂದ್ರ ಕಚೇರಿ, ಬೆಂಗಳೂರು
ಜೂನಿಯರ್ ಕನ್ಸಲ್ಟಂಟ್ (ಎಕ್ಸಿಕ್ಯೂಟೀವ್ ಇಂಜಿನಿಯರ್ ಲೆವೆಲ್) - 1
ಯೋಜನಾ ವ್ಯವಸ್ಥಾಪಕರು - 1
ಮೇಲ್ವಿಚಾರಕ ಹಾಗೂ ಮೌಲ್ಯಮಾಪನ ತಜ್ಞರು (ಎಂ ಆಂಡ್ ಇ ಎಕ್ಸ್ಪರ್ಟ್) - 1
ಸ್ಯಾನಿಟೇಷನ್ ಆ್ಯಂಡ್ ಹೈಜೀನ್ ಪ್ರಮೋಷನ್ ಕನ್ಸಲ್ಟಂಟ್ - 1
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು - 5
ಎಂಎಚ್ಎಂ ಕನ್ಸಲ್ಟಂಟ್ - 1
- ಜಿಲ್ಲಾ ಪಂಚಾಯಿತಿ ಕಚೇರಿ - ಜಲ ಜೀವನ ಮತ್ತು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)
ಜಿಲ್ಲಾ ಯೋಜನಾ ವ್ಯವಸ್ಥಾಪಕರು - 4
ಜಿಲ್ಲಾ ಎಂಐಎಸ್ ಸಮಾಲೋಚಕರು - 2
ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು - 2
ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು - 1
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು - 4
ವಿದ್ಯಾರ್ಹತೆ: ಸಿವಿಲ್/ ಎನ್ವಿರಾನ್ವೆುಂಟ್ ಇಂಜಿನಿಯರಿಂಗ್, ಸೋಷಿಯಲ್ ಸೈನ್ಸ್/ ಪಬ್ಲಿಕ್ ಹೆಲ್ತ್/ ರೂರಲ್ ಮ್ಯಾನೇಜ್ವೆುಂಟ್ ಪದವಿ, ಮ್ಯಾನೇಜ್ವೆುಂಟ್/ ಸೋಷಿಯಲ್ ಸೈನ್ಸ್/ ಸೋಷಿಯಲ್ ವರ್ಕ್, ಅರ್ಥಶಾಸ್ತ್ರ/ ಸ್ಟಾ್ಯಟಿಸ್ಟಿಕ್ಸ್/ ಪಬ್ಲಿಕ್ ಪಾಲಿಸಿ, ಮ್ಯಾನೇಜ್ವೆುಂಟ್/ ಎನ್ವಿರಾನ್ವೆುಂಟಲ್ ಸಸ್ಟೈನಿಬಿಲಿಟಿ, ರಿಪ್ರೊಡಕ್ಟೀವ್ ಹೆಲ್ತ್, ವುಮೆನ್ಸ್ ಸ್ಟಡಿಯಲ್ಲಿ ಸ್ನಾತಕೋತ್ತರ ಪದವಿ, ಎಂಸಿಎ/ ಎಂಎಸ್ಸಿ ಕಂಪ್ಯೂಟರ್ ಸೈನ್ಸ್/ ಬಿಇ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದು, ವೃತ್ತಿ ಅನುಭವ ಕೇಳಲಾಗಿದೆ. ದೂರಶಿಕ್ಷಣ ಮೂಲಕ ಪಡೆದ ಪದವಿ ಮಾನ್ಯತೆ ಇಲ್ಲ ಎಂದು ತಿಳಿಸಲಾಗಿದೆ.
ವಯೋಮಿತಿ: ಎಲ್ಲ ಹುದ್ದೆಗಳಿಗೂ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಎಲ್ಲೆಲ್ಲಿ ಉದ್ಯೋಗ?: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ರಾಮನಗರ, ಯಾದಗಿರಿ, ದಕ್ಷಿಣಕನ್ನಡ, ಚಿಕ್ಕಬಳ್ಳಾಪುರ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು ಮತ್ತು ಧಾರವಾಡಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವೇತನ: ಜೂನಿಯರ್ ಕನ್ಸಲ್ಟಂಟ್ ಹುದ್ದೆಗೆ ಮಾಸಿಕ 60,000 ರೂ. ಹಾಗೂ ಪ್ರಯಾಣ ವೆಚ್ಚ 15,000 ರೂ. ವೇತನ ನೀಡಲಾಗುವುದು. ಯೋಜನಾ ವ್ಯವಸ್ಥಾಪಕರಿಗೆ 1,00,000- 1,20,000 ರೂ., ಮೇಲ್ವಿಚಾರಕ ಮತ್ತು ಮೌಲ್ಯಮಾಪನ ತಜ್ಞ, ಹೈಜಿನ್ ಪ್ರಮೋಷನ್ ಕನ್ಸಲ್ಟಂಟ್ಗೆ 60,000-75,000 ರೂ., ತಾಜ್ಯ ನಿರ್ವಹಣೆ ಸಮಾಲೋಚಕ, ಜಿಲ್ಲಾ ಯೋಜನಾ ವ್ಯವಸ್ಥಾಪಕರಿಗೆ ಮಾಸಿಕ 35,000- 45,000 ರೂ. ಹಾಗೂ ಉಳಿದ ಹುದ್ದೆಗಳಿಗೆ 25,000- 30,000 ರೂ. ವೇತನ ನೀಡಲಾಗುವುದು.
ಸೂಚನೆ: ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ತಾನು ಈ ಹುದ್ದೆಗೆ ಯಾವ ರೀತಿ ಸೂಕ್ತ ಎಂದು ಒಂದು ಪುಟ ಟಿಪ್ಪಣಿ ಬರೆದು ಅರ್ಜಿಯನ್ನು ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆಎಚ್ಬಿ ಕಟ್ಟಡ, ಕಾವೇರಿ ಭವನ, ಕೆಜಿ ರಸ್ತೆ, ಬೆಂಗಳೂರು-5600009 ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ನಮೂನೆಯು ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿದೆ. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 27.9.2021
ಅಧಿಸೂಚನೆಗೆ: https://bit.ly/3Cf0wRi
ಮಾಹಿತಿಗೆ: rdpr.karnataka.gov.in