ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿಯ ಸಾವು: ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಬರೆದು ಎರಡು ವಾರದಲ್ಲೇ ಕೊನೆಯುಸಿರು

old man
Published on

ಟೊಕಿಯೋ: ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಚಿಟೆಟ್ಸು ವಟನಾಬೆ ಭಾನುವಾರಂದು ತಮ್ಮ ಕೊನೆಯುಸಿರೆಳೆದಿದ್ದಾರೆ. 112 ವರ್ಷಗಳ ಕಾಲ ಬದುಕಿದ್ದ ಚಿಟೆಟ್ಸು ಎರಡು ವಾರಗಳ ಹಿಂದಷ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಬರೆದಿದ್ದರು.

ಚಿಟೆಟ್ಸುಗೆ ಐವರು ಮಕ್ಕಳಿದ್ದಾರೆ. ಇತ್ತೀಚೆಗೆ ನಡೆದಿದ್ದ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಸದಾ ನಗುತ್ತಿದ್ದರೆ ಹೆಚ್ಚು ವರ್ಷ ಬದುಕಬಹುದು ಎಂದು ಹೇಳಿದ್ದರು. ಸಿಹಿ ತಿಂಡಿ ಎಂದರೆ ಇಷ್ಟ ಎಂದಿದ್ದ ಚಿಟೆಟ್ಸು ತಾನು ಸಾಕಷ್ಟು ಸಿಹಿ ತಿಂಡಿ ಬದುಕಿರುವುದಾಗಿಯೂ ತಿಳಿಸಿದ್ದರು.

ಜಪಾನ್​ನ ವಿಶ್ವದಲ್ಲೇ ಅತೀ ಹೆಚ್ಚು ಜೀವಿತಾವಧಿ ಹೊಂದಿರುವ ದೇಶವೆನಿಸಿಕೊಂಡಿದೆ. ಇದುವರೆಗೆ ಪ್ರಪಂಚದ ಅತ್ಯಂತ ಹಿರಿಯ ವಯಸ್ಕರು ಎನಿಸಿಕೊಂಡಿರುವವರು ಬಹುಪಾಲು ಜನರು ಜಪಾನ್​ ಮೂಲದವರೇ ಆಗಿದ್ದಾರೆ. ಇದುವರೆಗೆ ಅತಿ ಹೆಚ್ಚು ವರ್ಷ ಬದುಕಿದ್ದವರಲ್ಲಿ ಫ್ರಾನ್ಸ್​ನ ಜೀನ್​ ಲೂಯಿಸ್​ ಕ್ಯಾಲ್ಮೆಂಟ್​ (122) ಮೊದಲಿಗರಾಗಿದ್ದಾರೆ. ಅವರು 1997ರಲ್ಲಿ ಕೊನೆಯುಸಿರೆಳೆದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net