ಜನತಾ ಜಲಧಾರೆ ಸಂಕಲ್ಪ ಯಾತ್ರೆ: ಕೃಷ್ಣಾ ನದಿ ತೀರಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ

hdk
Published on

ವಿಜಯಪುರ: ಜೆಡಿಎಸ್​ನಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ 'ಜನತಾ ಜಲಧಾರೆ' ಸಂಕಲ್ಪ ಯಾತ್ರೆ ಹಿನ್ನೆಲೆ ಶನಿವಾರ ಕೃಷ್ಣಾ ನದಿಯಿಂದ ಕಳಸದಲ್ಲಿ ನೀರು ಸಂಗ್ರಹಿ ನದಿ ತೀರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನೂರಾರು ಕುಂಭಗಳೊಂದಿಗೆ ಯಾತ್ರೆಗೆ ಚಾಲನೆ ನೀಡಲಾಯಿತು.

ಇದಕ್ಕೂ ಮುನ್ನವೇ ಯಲಗೂರಿನ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ಸುಮಂಗಲಿಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಗೊಂಬೆ ಕುಣಿತ, ಡೊಳ್ಳು ಕುಣಿತ, ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ನಾಗಠಾಣ ಶಾಸಕ ದೇವಾನಂದ ಚೌವಾಣ್, ಸುನಿತಾ ಚವಾಣ್, ಹಾಗೂ ಇತರ ಮುಖಂಡರು ಪೂಜೆಯಲ್ಲಿ‌ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net