

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳದ 2ನೇ ದಿನವಾದ ಭಾನುವಾರ ರೈತರು ಭಾರಿ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಸಿಎಂ ಸಿದ್ದರಾಮಯ್ಯ ಆಗಮನ ಸುದ್ದಿ ಮತ್ತು ವಿಶೇಷವಾಗಿ ರಜಾ ದಿನವಾಗಿದ್ದರಿಂದ ರೈತಸಮೂಹ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿತ್ತು.
ವಿಶ್ವವಿದ್ಯಾಲಯದ ಅಂಕಿ- ಸಂಖ್ಯೆಯAತೆ ಮೇಳದ 1 ಮತ್ತು 2ನೇ ದಿನ ಸೇರಿ 7.28 ಲಕ್ಷ ರೈತ ಬಾಂಧವರು, ವಿಸ್ತರಣಾ ಕಾರ್ಯಕರ್ತರು ಹಾಗೂ ಇಲಾಖೆಯ ಅಽಕಾರಿಗಳು ಪಾಲ್ಗೊಂಡಿದ್ದರು. ಬೀಜ ಘಟಕದಿಂದ ಭಾನುವಾರ ಸುಮಾರು 61.09 ಲಕ್ಷ ರೂಪಾಯಿ ಮೌಲ್ಯದ 595 ಕ್ವಿಂಟಲ್ ಹಿಂಗಾರು ಬೆಳೆಗಳ ಬೀಜಗಳನ್ನು ಮಾರಾಟ ಮಾಡಲಾಗಿದೆ.