ಗಾಳಿಗುತ್ತಿ ಗ್ರಾಮದಲ್ಲಿ ಮನೆ ಜಖಂ

rain house
ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಗಾಳಿಗುತ್ತಿ ಗ್ರಾಮದಲ್ಲಿ ಮನೆ ಕುಸಿದಿರುವುದು.
Published on

ಕಡೂರು: ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಗಾಳಿಗುತ್ತಿ ಗ್ರಾಮದಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದ್ದು ಭಾನುವಾರ ಬೆಳಗಿನಜಾವ ಮನೆ ಪೂರ್ಣ ಕುಸಿದಿದ್ದು, ಅದೃಷ್ಟವಶಾತ್ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ.

ಶನಿವಾರ ಆರಂಭವಾದ ಗಾಳಿ-ಮಳೆ ಭಾನುವಾರವೂ ಆರ್ಭಟಿಸಿತು. ಗಾಳಿಗುತ್ತಿ ಗ್ರಾಮದ ಪುಷ್ಪಾಬಾಯಿ ಎಂಬುವರ ಮನೆ ಕುಸಿದಿದ್ದು, ಕಂದಾಯ ವಿಭಾಗದ ಅಧಿಕಾರಿಗಳು ಸ್ಥಳ ವೀಕ್ಷಿಸಿದರು. ಮಲೆನಾಡ ಗಿರಿಶ್ರೇಣಿಗಳಲ್ಲಿ ಆರ್ಭಟಿಸುತ್ತಿರುವ ಮಳೆಗೆ ಮದಗದಕೆರೆಯ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 15 ದಿನಗಳ ಹಿಂದೆ ಬರಡಾಗಿದ್ದ ಕೆರೆಯಲ್ಲಿ ಪ್ರಸ್ತುತ 40 ಅಡಿ ನೀರು ಸಂಗ್ರಹವಾಗಿದ್ದು, ಕೆರೆಕೋಡಿ ಬೀಳಲು ಇನ್ನು 25 ಅಡಿ ಬಾಕಿ ಇದೆ. ಮಲೆನಾಡು ಭಾಗದಲ್ಲಿ ಮಳೆಯಾರ್ಭಟ ಮುಂದುವರಿದರೆ ಆಗಸ್ಟ್ ಮೊದಲ ವಾರದಲ್ಲಿ ಕೆರೆಕೋಡಿ ಬೀಳುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net