

ಹೊಸನಗರ: ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಆಯೋಜಿಸುವುದರಿಂದ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ಅವಕಾಶ ಸಿಗುತ್ತದೆ ಎಂದು ಗ್ರಾಪಂ ಒಕ್ಕೂಟದ ಸಂಚಾಲಕ ಕರುಣಾಕರ ಶೆಟ್ಟಿ ಹೇಳಿದರು.
ತಾಲೂಕಿನ ನಗರದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಮಹತ್ವದ ಕಾರ್ಯಕ್ರಮ ಆಗಿದ್ದು, ಭವಿಷ್ಯದಲ್ಲಿ ಕಲಾವಿದರಾಗಿ ರೂಪಿತವಾಗುತ್ತಾರೆ. ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಹಬ್ಬವಾಗಬೇಕು. ಸರ್ಕಾರ ಪ್ರತಿ ಕಾರಂಜಿಗೂ ಸೂಕ್ತ ಅನುದಾನ ನೀಡಬೇಕು ಮತ್ತು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಕೆ.ರಮೇಶ್, ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯೆ ಜಯಲಕ್ಷ್ಮೀ ಎಸ್. ರಾವ್, ಶಾರದಾ ಗೋಖಲೆ, ಸಿಆರ್‌ಪಿ ವಿ.ಡಿ.ನಾಗರಾಜ್, ಶಿಕ್ಷಕರ ಸಂಘದ ಅರವಿಂದ್, ಮುಖ್ಯಶಿಕ್ಷಕಿ ಸಾಕಮ್ಮ, ಪ್ರಮುಖರಾದ ಶಿಲ್ಪಾ ಹೊಳ್ಳ, ದೇವರಾಜ, ದೇವು, ಜಿ.ರಾಘವೇಂದ್ರ, ಗುರುರಾಜ್, ಸುನೀತಾ ಶೇಟ್, ಹೇಮಾವತಿ, ಸರಿತಾ ಇತರರಿದ್ದರು.