ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಅದ್ದೂರಿ ಸ್ವಾಗತ

soldier
ಯೋಧ ರಮೇಶ್ ಅವರನ್ನು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸನ್ಮಾನಿಸಿ ಸ್ವಾಗತಿಸಲಾಯಿತು. ಸಂತೇಕಡೂರು ವಿಜಯಕುಮಾರ್, ಸಿಂಧು ಹಾಗೂ ಅಮರಾವತಿ ಗ್ರಾಮಸ್ಥರಿದ್ದರು.
Published on

ಶಿವಮೊಗ್ಗ: ಭಯೋತ್ಪಾದಕರ ವಿರುದ್ಧ ನಡೆದ ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿದ್ದ ಶಿವಮೊಗ್ಗ ತಾಲೂಕು ಹಸೂಡಿ ಗ್ರಾಪಂ ವ್ಯಾಪ್ತಿಯ ಅಮರಾವತಿ ಗ್ರಾಮದ ಯೋಧ ರಮೇಶ್ ಬುಧವಾರ ಸ್ವಗ್ರಾಮಕ್ಕೆ ಆಗಮಿಸಿದರು. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅವರನ್ನು ಸ್ಥಳೀಯರು ಆತ್ಮೀಯವಾಗಿ ಬರಮಾಡಿಕೊಂಡರು.

ಹಾಪ್‌ಕಾಮ್ಸ್ ಅಧ್ಯಕ್ಷ ಸಂತೇಕಡೂರು ವಿಜಯಕುಮಾರ್ ನೇತೃತ್ವದಲ್ಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸ್ಥಳೀಯರು ರಮೇಶ್ ಅವರಿಗೆ ಹಾರ ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡರು. ತಮ್ಮೂರಿನ ಯೋಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಭಾಗವಾಗಿದ್ದ ಎಂಬುದೆ ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಸಂಭ್ರಮಿಸಿದರು.

ಗ್ರಾಮಸ್ಥರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯೋಧ ರಮೇಶ್, ಆಪರೇಷನ್ ಸಿಂಧೂರದ ಭಾಗವಾಗಿ ನಾನು ಅಮೃತಸರದ ಗಡಿಯಲ್ಲಿ ಕಾರ್ಯನಿರ್ವಹಿಸಿದ್ದೆ. ಇಲ್ಲಿನ ಭವ್ಯ ಸ್ವಾಗತ ನನಗೆ ಇನ್ನಷ್ಟು ಉತ್ಸಾಹ ನೀಡಿದೆ ಎಂದರು. ಅವರ ಪತ್ನಿ ಸಿಂಧು ಮಾತನಾಡಿ, ನಾನು ಯೋಧನ ಪತ್ನಿ ಎನ್ನುವುದೆ ನನಗೆ ಅತ್ಯಂತ ಸಂತೋಷದ ಸಂಗತಿ. ಸ್ವಂತ ಊರಿಗೆ ಆಗಮಿಸುವ ಎಲ್ಲ ಯೋಧರಿಗೂ ಇದೇ ರೀತಿ ಸ್ವಾಗತ ಸಿಗುವಂತಾಗಲಿ ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net