ಹಾಲಿ ಅಧ್ಯಕ್ಷರ ನೇತೃತ್ವದ ತಂಡಕ್ಕೆ ಭರ್ಜರಿ ಗೆಲುವು

09 tnp photo 01
Published on

ತಿ.ನರಸೀಪುರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಮಲ್ಲಣ್ಣ ನೇತೃತ್ವದ ತಂಡಕ್ಕೆ ಭರ್ಜರಿ ಗೆಲುವಾಗಿದ್ದು, 10 ಜನ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

ಸಂಘದಲ್ಲಿ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು. ಸಾಲಗಾರರ ಕ್ಷೇತದಲ್ಲಿ 10 ನಿರ್ದೇಶಕರ ನ್ನು ಆಯ್ಕೆ ಮಾಡಲು ಸೋಮವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಬಿರುಸಿನ ಮತದಾನ ನಡೆಯಿತು.

ಸಾಲಗಾರರ ಸದಸ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲಣ್ಣ(280 ಮತ), ಅಂಗಡಿ ಎನ್.ಶೇಖರ(254), ಮಹಾಲಿಂಗಪ್ಪ (225), ಟಿ.ಸಿ.ಫಣೀಶ್ ಕುಮಾರ್(223), ಹೊಸ ತಿರುಮಕೂಡಲು ವೆಂಕಟೇಶ್(216), ಹಿಂದುಳಿದ ವರ್ಗ ’ಎ’ ಮೀಸಲಿನಲ್ಲಿ ಸ್ಪರ್ಧಿಸಿದ್ದ ಎಸ್.ರಮೇಶ್(271), ಎಂ.ನಾಗರತ್ನ(247), ಪರಿಶಿಷ್ಟ ಜಾತಿ ಮೀಸಲು ಅಭ್ಯರ್ಥಿಯಾಗಿದ್ದ ದೊಡ್ಡ ಬಸವಯ್ಯ(220), ಮಹಿಳಾ ಮೀಸಲು ಅಭ್ಯರ್ಥಿಗಳಾಗಿದ್ದ ಬಿ.ಚಂದ್ರಮ್ಮ(243) ಹಾಗೂ ನಾಗಮ್ಮ(234 ಮತಗಳು) ಅವರು ಗೆಲುವು ಸಾಧಿಸಿದರು.

ಸಾಮಾನ್ಯ ವರ್ಗದಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ಎಂ.ರಾಜಬುದ್ಧಿ, ಎಂ. ಬಸವರಾಜು, ಡಿ.ಪ್ರಕಾಶ್, ಚಂದ್ರಶೇಖರ, ಹಿಂದುಳಿದ ವರ್ಗ ಎ ಮೀಸಲಿನಡಿ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಎಂ.ಸಿದ್ದೇಗೌಡ, ಪರಿಶಿಷ್ಟ ಜಾತಿ ಮೀಸಲು ಪ್ರತಿಸ್ಪರ್ಧಿಯಾಗಿದ್ದ ಸಿ.ಮಹದೇವ, ಮಹಿಳಾ ಮೀಸಲು ಪ್ರತಿ ಸ್ಪರ್ಧಿಗಳಾಗಿ ಕಣದಲ್ಲಿದ್ದ ಚಂದ್ರಮ್ಮ ಹಾಗೂ ಎಂ.ಉಮಾ ಅವರು ಪರಾಭವಗೊಂಡರು.

ಸಾಲಗಾರರ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಅಭ್ಯರ್ಥಿಯಾಗಿ ಆರ್.ಉದಯರವಿ ಹಾಗೂ ಸಾಲಗಾರರಲ್ಲದ ಸದಸ್ಯರ ಕ್ಷೇತ್ರಕ್ಕೆ ಕೆ.ನಂಜುಂಡಸ್ವಾಮಿ ಅವರೊಬ್ಬರೇ ಕಣದಲ್ಲಿ ಉಳಿದಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಅನಸೂಯಾ, ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಟಿ.ಎನ್.ಕಿರಣ್ ಕಾರ್ಯನಿರ್ವಹಿಸಿದರು.

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನೂತನ ನಿರ್ದೇಶಕರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ತಾಪಂ ಸದಸ್ಯ ಎಂ.ಚಂದ್ರಶೇಖರ್, ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಮೂಗೂರು ಪಿಎಸಿಸಿಎಸ್ ನಿರ್ದೇಶಕ ಫ್ಯಾನ್ಸಿ ಮೋಹನ್, ಮುಖಂಡರಾದ ಸೋಮಣ್ಣ, ಕಿರಗಸೂರು, ತಿರುಮಕೂಡಲು ಜಯರಾಮ, ರಾಮು, ಬಿಲಿಗೆರೆಹುಂಡಿ ಮಹೇಶ್,ಲಕ್ಷ್ಮಣ, ಅಂಗಡಿ ರಮೇಶ, ಹಾಲಿನ ಸತ್ಯ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net