ಬಿಲ್ಗುಣಿ ಗ್ರಾಮದಲ್ಲಿ ಅದ್ಧೂರಿ ರಾಮೋತ್ಸವ

bilguni ramanavami
ಶಿವಮೊಗ್ಗ ತಾಲೂಕಿನ ಬಿಲ್ಗುಣಿ ಗ್ರಾಮದಲ್ಲಿ ಶ್ರೀ ರಾಮೋತ್ಸವದಲ್ಲಿ ಪಾಲ್ಗೊಂಡಿದ್ದ ರಾಮಭಕ್ತರು.
Published on

ಶಿವಮೊಗ್ಗ: ತಾಲೂಕಿನ ಬಿಲ್ಗುಣಿ ಗ್ರಾಮದಲ್ಲೂ ಶ್ರೀ ರಾಮೇಶ್ವರ ಕಮಿಟಿಯಿಂದ ಶ್ರೀರಾಮನವಮಿಯನ್ನೂ ಅದ್ಧೂರಿಯಾಗಿ ಆಚರಿಸಿದರು. ಗ್ರಾಮಸ್ಥರೆಲ್ಲ ರಾಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಾಮ ನಮ ಜಪ ಮೊಳಗಿಸಿದರು. ಬಳಿಕ ಭಕ್ತರಿಗೆ ಪಾನಕ, ಕೋಸಂಬರಿ, ಪ್ರಸಾದವನ್ನು ವಿತರಿಸಲಾಯಿತು. ದಾನಯ್ಯ ಅವರು ಪೂಜೆ ಸಲ್ಲಿಸಿದರು. ತಮ್ಮಡಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರತಿಭಾ, ಗ್ರಾಮಸ್ಥರಾದ ಲೋಕೇಶಪ್ಪ, ಮಾಲತೇಶ್, ಶೇಖರಪ್ಪ, ಜಗದೀಶ್, ವೀರಣ್ಣಗೌಡ, ಅವಿನಾಶ್, ದಿನೇಶ್, ಸಾಕಮ್ಮ, ಸುಮಿತ್ರಮ್ಮ, ಮಾಲತಿ, ಸೌಮ್ಯ, ಸುಧಾ, ರತ್ನಮ್ಮ, ವೀಣಾ, ರಾಧಾ, ಸುಧಾ ಜಗದೀಶ್, ಲಲಿತಮ್ಮ, ವೀಣಾ ಸತೀಶ್, ಹಾಲಮ್ಮ, ರೇಣುಕಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net