ತೋಟದ ಮನೆಗಳಲ್ಲೂ ಅದ್ಧೂರಿ ಪಾರ್ಟಿ

new year party in shimogga
ಶಿವಮೊಗ್ಗದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಹೆಜ್ಜೆ ಹಾಕಿದ ಯುವತಿಯರು.
Published on

ಶಿವಮೊಗ್ಗ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಗರದ ವಿವಿಧೆಡೆ ಕ್ಲಬ್, ಹೊಟೇಲ್ ಮತ್ತು ರೆಸಾರ್ಟ್‌ಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ಕಂಟ್ರಿ ಕ್ಲಬ್ ಸೇರಿ ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಟುಂಬ ಸಹಿತ ಮತ್ತು ಸ್ನೇಹಿತರ ಜತೆಗೆ ಕ್ಲಬ್ ಸದಸ್ಯರು, ನಾಗರಿಕರು ಪಾರ್ಟಿಗಳಲ್ಲಿ ಭಾಗವಹಿಸಿ ಹಾಡು, ನೃತ್ಯ, ವಿವಿಧ ಸ್ಪರ್ಧೆಗೆ ಹೆಜ್ಜೆ ಹಾಕಿ ಖುಷಿಪಟ್ಟರು.

ನಗರದ ಹೊರ ವಲಯದ ತೋಟ, ತೋಟದ ಮನೆಗಳಲ್ಲೂ ಅದ್ಧೂರಿ ಪಾರ್ಟಿಗಳು ನಡೆದವು. ಮನೆಗಳಲ್ಲೂ ನಾಗರಿಕರು ನಡುರಾತ್ರಿವರೆಗೆ ಕಾದಿದ್ದು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.

ಹೊಸ ವರ್ಷದ ಪಾರ್ಟಿಗಳ ಹಿನ್ನೆಲೆ ಮದ್ಯ ಮಾರಾಟ ಬಿರುಸಾಗಿತ್ತು. ಜಿಲ್ಲೆಯಾದ್ಯಂತ ಬಾರ್, ವೈನ್ ಶಾಪ್‌ಗಳಲ್ಲಿ ಮದ್ಯ ಖರೀದಿ ಜೋರಿತ್ತು. ಮಂಗಳವಾರ ಮಧ್ಯಾಹ್ನದಿಂದಲೆ ಮದ್ಯ, ಚಿಕನ್, ಮಟನ್ ಖರೀದಿ ನಡೆಯುತ್ತಿತ್ತು. ತಡರಾತ್ರಿವರೆಗೆ ಪಾರ್ಟಿಗಳು, ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net