ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ

IMG-20250427-WA0034
ಶ್ರೀ ಸಿದ್ದೇಶ್ವರ ಸ್ವಾಮಿ
Published on

ಅರಸೀಕೆರೆ (ಗ್ರಾಮಾಂತರ): ಕಸಬಾ ಹೋಬಳಿ ಸಿದ್ದರಹಳ್ಳಿ ಗ್ರಾಮದಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ರಾರಾಜಿಸುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮಿಗೆ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಜರುಗಿತು.

ಭಾನುವಾರ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳು ರಾತ್ರಿ 9.30ಕ್ಕೆ ಮದ್ದು ಗುಂಡುಗಳೊಂದಿಗೆ ಪ್ರದರ್ಶನಗೊಂಡಿತು.

ಸೋಮವಾರ ಬೆಳಗ್ಗೆ 8.30ಕ್ಕೆ ಶ್ರೀ ಸಿದ್ದೇಶ್ವರ ಸ್ವಾಮಿ, ತಿಪಟೂರು ತಾಲೂಕು ಸಾರ್ತುವಳ್ಳಿ ಶ್ರೀ ರಾಮೇಶ್ವರ ಸ್ವಾಮಿ, ಜಾಜೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ, ಅಗ್ಗುಂದ ಗ್ರಾಮದ ಶ್ರೀ ಉಡಿಸಲಮ್ಮ ದೇವಿಗೆ ರುದ್ರಾಭಿಷೇಕ ನಂತರ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಎಲ್ಲ ದೇವಾನು-ದೇವತೆಗಳಿಗೆ ಪುಷ್ಪಾಲಂಕಾರ ಕಾರ್ಯಕ್ರಮ ಇರುತ್ತದೆ. ನಂತರ ಸಂಜೆ 6 ಗಂಟೆಗೆ ಸ್ವಾಮಿ ಅವರ ಉತ್ಸವದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ನಡೆಮಡಿಯೊಂದಿಗೆ ಶ್ರೀ ಸಿದ್ದೇಶ್ವರ ಸ್ವಾಮಿಯವರ ಅಗ್ನಿಕುಂಡಾರ್ಚನೆಗೆ ದಯಮಾಡಿಸುವರು ರಾತ್ರಿ 8.30ಕ್ಕೆ ಪೂಜಾ ಕಾರ್ಯಕ್ರಮದೊಂದಿಗೆ ಅಗ್ನಿಕುಂಡ ಪ್ರವೇಶ ಮಾಡಲಿದ್ದಾರೆ.

ನಂತರ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಗುರುಪರುವು (ಅನ್ನ ಸಂತರ್ಪಣೆ) ರಾತ್ರಿ 9.30ಕ್ಕೆ ನಡೆಯಲಿದ್ದು ಭಕ್ತಾದಿಗಳು ಶ್ರೀ ಸ್ವಾಮಿ ಅವರ ಕೃಪೆಗೆ ಪಾತ್ರರಾಗಿ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಮಂಗಳವಾರ ಅಕ್ಗುಂದ ಗ್ರಾಮದೇವತೆ ಶ್ರೀ ಉಡಸಲಮ್ಮ ದೇವಿಯವರಿಗೆ ಮಡಿಲಕ್ಕಿ ಸೇವೆಯೊಂದಿಗೆ ಗ್ರಾಮಕ್ಕೆ ಬೀಳ್ಕೊಡಲಾಗುವುದು. ಸಂಜೆ 6 ಗಂಟೆಗೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಧ್ವಜಾರೋಹಣ ವಿಸರ್ಜಿಸಲಾಗುವುದು. ಮೂರು ದಿನಗಳವರೆಗೆ ಸಿದ್ದರಹಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಜರುಗಲಿದ್ದು, ಭಕ್ತಾದಿಗಳು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net