

ಬೆಂಗಳೂರು: 2013ರಿಂದ 2018ರವರೆಗೆ ಕಾಂಗ್ರೆಸ್‌ನವರ ಆಡಳಿತದಲ್ಲಿನ ಮೇಕೆದಾಟು ವಿಚಾರದಲ್ಲಿ ಹೊಣೆಗೇಡಿತನದ ಸ್ಫೋಟಕ ಮಾಹಿತಿಯನ್ನು ಸಾಕ್ಷಿ ಸಮೇತ ಹೊರಗೆ ಹಾಕುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ, ಅವರ ಅವಧಿಯಲ್ಲಿನ ಹೊಣೆಗೇಡಿತನವನ್ನು ಜನವರಿ ಒಂಬತ್ತರೊಳಗೆ ಬಹಿರಂಗ ಮಾಡುತ್ತೇನೆ ಎಂದಿದ್ದಾರ.
ಪ್ರಕರಣ ಸುಪ್ರಿಂಕೋರ್ಟ್ ಮುಂದೆ ಬರಲಿದೆ. ಹೀಗಾಗಿ ಹೆಚ್ಚಿಗೆ ಮಾತನಾಡಲ್ಲ. ಈ ವಿಷಯದಲ್ಲಿ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ, ನಾವು ರಾಜಕೀಯ ಮಾಡಲ್ಲ. ವಾಸ್ತವದ ಕಾರ್ಡ್ ಜನರ ಮುಂದೆ ಇಡುತ್ತೇವೆ ಎಂದು ಗೋವಿಂದ ಕಾರಜೋಳ ಹೇಳಿದರು.
ಕಾಂಗ್ರೆಸ್‌ನವರ ಪಾದಯಾತ್ರೆ ಅಧಿಕಾರಕ್ಕಾಗಿ, ಕುರ್ಚಿಗಾಗಿ ನಡೆಯುವ ಹೋರಾಟ, ಲೀಡರ್ ಆಗಿ ಹೊರಹೊಮ್ಮಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಸಿಂದಗಿ ಉಪಚುನಾವಣೆ ವೇಳೆ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ತಮ್ಮ ಮನಸ್ಥಿತಿ ಹೊರಹಾಕಿದರು. ಹೊಟ್ಟೆ ಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಎಂದಿದ್ದರು. ಸಿದ್ದರಾಮಯ್ಯ ಈ ಮಟ್ಟಿಗೆ ಮಾತನಾಡುತ್ತಾರೆ ಎಂದುಕೊಂಡಿರಲಿಲ್ಲ. ದೀನದಲಿತರ ಬಗ್ಗೆ ಕೆಟ್ಟ ಮನಸ್ಥಿತಿ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಆ ಮಾತು ಸಾಕ್ಷಿ. ಅವರಿಗೆ ದಲಿತ ಸಮುದಾಯ ಪಾಠ ಕಲಿಸಲಿದೆ ಎಂದು ಕಾರಜೋಳ ಹೇಳಿದರು.